ದೇಶ

ಭ್ರಷ್ಟಾಚಾರ ಬೆಂಬಲಿಸಿದ ನಿತೀಶ್ ಕುಮಾರ್ ಗೆ ಜೈಲೇ ಗತಿ: ಚಿರಾಗ್ ಪಾಸ್ವಾನ್

Lingaraj Badiger

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಎರಡೇ ದಿನ ಬಾಕಿ ಇದ್ದು, ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿವೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಲೋಕ ಜನಶಕ್ತಿ ಪಕ್ಷದ (ಎಲ್‍ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಅವರು, ಎಲ್ ಜೆಪಿ ಅಧಿಕಾರಕ್ಕೆ ಬಂದರೆ ಅವರನ್ನು ಜೈಲಿಗೆ ಕಳುಹಿಸಲಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಪ್ರಮುಖ ಏಳು ಪರಿಹಾರಗಳು ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಎಲ್ ಜೆಪಿ ಅಧಿಕಾರಕ್ಕೆ ಬಂದರೆ ಆ ಬಗ್ಗೆ ತನಿಖೆ ಮಾಡಿ ಮುಖ್ಯಮಂತ್ರಿ ಸೇರಿದಂತೆ ತಪ್ಪಿತಸ್ಥ ಎಲ್ಲರನ್ನೂ ಜೈಲಿಗೆ ಕಳುಹಿಸಲಾಗುವುದು ಎಂದು ಚಿರಾಗ್ ಹೇಳಿದ್ದಾರೆ.

'ನಿತೀಶ್ ಕುಮಾರ್ ಅವರು ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ, ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಮತ್ತು ರಾಜ್ಯಕ್ಕೆ ಮದ್ಯ ಕಳ್ಳಸಾಗಣೆಯಿಂದ ಸಿಎಂ ಲಾಭ ಗಳಿಸಿದ್ದಾರೆ' ಎಂದು ಆರೋಪಿಸಿದರು.

ನಿತೀಶ್ ಕುಮಾರ್ ಅವರು ಮದ್ಯ ನಿಷೇಧವನ್ನು ಏಕೆ ಪರಿಶೀಲಿಸಲಾಗುವುದಿಲ್ಲ? ಬಿಹಾರದಲ್ಲಿ ಮದ್ಯ ಕಳ್ಳಸಾಗಣೆದಾರರು ಇಲ್ಲವೇ? ಬಿಹಾರಕ್ಕೆ ಆಲ್ಕೋಹಾಲ್ ಕಳ್ಳಸಾಗಣೆ ಇಲ್ಲವೇ? ಇಡೀ ರಾಜ್ಯ ಸರ್ಕಾರವೇ ಮದ್ಯ ಕಳ್ಳಸಾಗಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.

SCROLL FOR NEXT