ಮಹಿಳೆಯರು ಪುರುಷರಿಗೆ ಸಮಾನರಲ್ಲ: ಸ್ತ್ರೀಯರು ಕೆಲಸ ಪ್ರಾರಂಭಿಸಿದ್ದೇ ಮೀಟೂ ಅಭಿಯಾನಕ್ಕೆ ಕಾರಣ- ಮುಖೇಶ್ ಖನ್ನಾ
ಮಹಿಳೆಯರು ಕೆಲಸಕ್ಕಾಗಿ ಮನೆಯಿಂದ ಹೊರಬಂದ ನಂತರ ಮೀಟೂ ಅಭಿಯಾನ ಆರಂಭವಾಯಿತು ಎಂದು ಹೇಳಿಕೆ ನೀಡಿರುವ ನಟ ಮುಖೇಶ್ ಖನ್ನಾ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂಬೈ: ಮಹಿಳೆಯರು ಕೆಲಸಕ್ಕಾಗಿ ಮನೆಯಿಂದ ಹೊರಬಂದ ನಂತರ ಮೀಟೂ ಅಭಿಯಾನ ಆರಂಭವಾಯಿತು ಎಂದು ಹೇಳಿಕೆ ನೀಡಿರುವ ನಟ ಮುಖೇಶ್ ಖನ್ನಾ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರಂಭಿಸಿದ ನಂತರ 2018ರಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ದೇಶದಲ್ಲಿ ಮೀಟೂ ಅಭಿಯಾನ ಆರಂಭವಾಗಿತ್ತು.ಆಗಿನಿಂದಲೇ ಬಾಲಿವುಡ್ ನಲ್ಲಿನ ಅನೇಕ ಮಹಿಳೆಯರು ಅಪಾದಿತ ದುಷ್ಕರ್ಮಿಗಳನ್ನು ಹೆಸರಿಸಿದ್ದಾರೆ.
ಮಹಿಳೆಯರು ಕೆಲಸ ಆರಂಭಿಸಿದ್ದೇ ಮೀಟೂ ಅಭಿಯಾನ ಆರಂಭಕ್ಕೆ ಕಾರಣ, ಇಂದು ಮಹಿಳೆಯರು ಪುರುಷರೊಂದಿಗೆ ಸಮಾನರಲ್ಲ ಎಂದು ಮುಖೇಶ್ ಖನ್ನಾ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
ಶಕ್ತಿಮಾನ್ ಸೂಪರ್ ಹಿರೋ ನೀಡಿರುವ ಹೇಳಿಕೆ ಅನೇಕ ಟ್ವಿಟಿಗರನ್ನು ಕೆರಳಿಸಿದೆ. 5-6 ವರ್ಷ ವಯಸ್ಸಿನ ಮಕ್ಕಳು ಏಕೆ ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.