ದೇಶ

ಒಂದೇ ದಿನ  19 ರ‍್ಯಾಲಿಗಳೊಂದಿಗೆ ಭಾರತೀಯ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ ತೇಜಸ್ವಿ ಯಾದವ್ 

Nagaraja AB

ಪಾಟ್ನಾ: ಬಿಹಾರದಲ್ಲಿ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಶನಿವಾರ ಒಂದೇ ದಿನ 19 ಚುನಾವಣಾ ರ‍್ಯಾಲಿಗಳನ್ನು ನಡೆಸುವ ಮೂಲಕ ಭಾರತೀಯ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

31 ವರ್ಷದ ಯುವ ಮುಖಂಡ ತೇಜಸ್ವಿ ಯಾದವ್ ತಮ್ಮ ತಂದೆ ಲಾಲೂ ಪ್ರಸಾದ್ ಅವರ ದಾಖಲೆಯನ್ನು ಮುರಿದಿದ್ದಾರೆ. ಲಾಲೂ ಪ್ರಸಾದ್ ಯಾದವ್  ಒಂದೇ ದಿನ 16 ರ‍್ಯಾಲಿಗಳನ್ನು ನಡೆಸಿದ ದಾಖಲೆ ಹೊಂದಿದ್ದರು. ಜನರ ಬೆಂಬಲ , ಪ್ರೀತಿ ಮತ್ತು ಸಹಕಾರದಿಂದ  ಸವಾಲಿನ ಕಾರ್ಯವನ್ನು ಮಾಡಿರುವುದಾಗಿ ಆರ್ ಜೆಡಿಯ ಏಕೈಕ ಸ್ಟಾರ್ ಪ್ರಚಾರಕರು ಆಗಿರುವ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

ನವೆಂಬರ್ 3 ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಗಾಗಿ ಬಿಹಾರದ ವಿವಿಧ ಕಡೆಗಳಲ್ಲಿ ತೇಜಸ್ವಿ ಯಾದವ್ ರ‍್ಯಾಲಿಗಳನ್ನು ನಡೆಸಿದ್ದಾರೆ. ತೇಜಸ್ವಿ ಯಾದವ್ ಒಬ್ಬರೇ ಜನರನ್ನು ಸೇರಿಸುತ್ತಿದ್ದು, ಬಿಹಾರದ ಎನ್ ಡಿಎ ಮುಖಂಡರಲ್ಲಿ ಆತಂಕ ಶುರುವಾಗಿದೆ.

ತೇಜಸ್ವಿ ಯಾದವ್ ರ‍್ಯಾಲಿಗಳಲ್ಲಿ ಜನರು ಸೇರುತ್ತಿರುವುದನ್ನು ನೋಡಿ ಗಾಬರಿಗೊಂಡಿರುವ ಎನ್ ಡಿಎ ಮುಖಂಡರು ಭಾನುವಾರ ಆರು ರ‍್ಯಾಲಿಗಳನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT