ದೇಶ

ಚೀನಾ ಸೇನೆಯಿಂದ ಐವರು ಯುವಕರ ಅಪಹರಣ: ಪಿಎಲ್ ಎಗೆ ಭಾರತೀಯ ಸೇನೆಯಿಂದಹಾಟ್ ಲೈನ್ ಸಂದೇಶ

Lingaraj Badiger

ಇಟಾನಗರ: ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ನಿರಿ ಜಿಲ್ಲೆಯಿಂದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿದ ವರದಿಗಳಿಗೆ ಸಂಬಂಧಿಸಿದಂತೆ ಭಾರತೀ ಸೇನೆ ಈಗಾಗಲೇ ಚೀನಾದ ಪೀಪಲ್ಸ್ ಲಿಬರೇಷನ್ ಆಫ್ ಆರ್ಮಿ(ಪಿಎಲ್ ಎ)ಗೆ ಹಾಟ್ ಲೈನ್ ಸಂದೇಶ ಕಳುಹಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಭಾನುವಾರ ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ ಸ್ಥಾಪಿಸಲಾಗಿರುವ ಪಿಎಲ್ ಕೇಂದ್ರಕ್ಕೆ ಅಪಹರಣ ಕುರಿತು ಭಾರತೀಯ ಸೇನೆ ಈಗಾಗಲೇ ಹಾಟ್ ಲೈನ್ ಸಂದೇಶವನ್ನು ಕಳುಹಿಸಿದೆ. ಆ ಕಡೆಯಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ ಎಂದು ಎಂದು ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ರಿಜಿಜು ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ, ಬೇಟೆಯಾಡಲು ಹೋಗಿದ್ದ ಐವರು ಯುವಕರನ್ನು ನಾಚೊ ಬಳಿಯ ಕಾಡಿನಿಂದ ಅಪಹರಿಸಲಾಗಿದೆ.

ಚೀನಾದ ಪಿಎಲ್ ಎ ಸೈನಿಕರು ನಾಚೊ ವೃತ್ತದಿಂದ ತನ್ನ ಸಹೋದರ ಮತ್ತು ಇತರ ನಾಲ್ವರನ್ನು ಅಪಹರಿಸಲಾಗಿದೆ ಎಂದು ಅಪಹೃತರ ಕುಟುಂಬದ ಸದಸ್ಯರೊಬ್ಬರು ಆರೋಪಿಸಿದ್ದಾರೆ.

SCROLL FOR NEXT