ಮುಂಬೈಯಲ್ಲಿರುವ ನಟಿ ಕಂಗನಾ ಪ್ರೊಡಕ್ಷನ್ ಹೌಸ್ 
ದೇಶ

ಮುಂಬೈಗೆ ಹೊರಟ ನಟಿ ಕಂಗನಾಗೆ ಮಹಾನಗರ ಪಾಲಿಕೆ ಶಾಕ್:ಬಂಗಲೆಯ ಒಂದು ಭಾಗ ನೆಲಸಮ, ಹೈಕೋರ್ಟ್ ಮೊರೆ ಹೋದ ನಟಿ 

ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ.

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ.

ಇಂದು ಬೆಳಗ್ಗೆ ಮುಂಬೈ ಮಹಾನಗರ ಪಾಲಿಕೆ ನಟಿಗೆ ಆಘಾತವನ್ನುಂಟುಮಾಡಿದ್ದು, ಮುಂಬೈಯ ಬಾಂದ್ರಾದ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಬಂಗಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜೆಸಿಬಿ ಮೂಲಕ  ನೆಲಸಮ ಮಾಡುವ ಕಾರ್ಯ ಮಾಡಿದೆ. ಇಂದು ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದು ಬಂಗಲೆಯನ್ನು ವಿಸ್ತರಿಸಿ ಕಟ್ಟುವಾಗ ಅಕ್ರಮ ನಡೆದಿದೆ ಎಂದು ಬಂಗಲೆ ಮುಂದೆ ಹಚ್ಚಿರುವ ನೊಟೀಸ್ ನಲ್ಲಿ ತಿಳಿಸಿದೆ.

ಈ ಬಗ್ಗೆ ಕಂಗನಾ ರಾನಾವತ್ ಅವರ ಪರ ವಕೀಲ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದು ಇಂದು ಬೆಳಗ್ಗೆ ತುರ್ತು ವಿಚಾರಣೆಗೆ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಬಿಎಂಸಿಯ ಧ್ವಂಸ ಕಾರ್ಯಾಚರಣೆಗೆ ಮಧ್ಯಂತರ ತಡೆ ತರಬೇಕೆಂದು ಕೋರಿದ್ದೇವೆ ಎಂದರು.

ಇಂದು ಅಪರಾಹ್ನ ಮುಂಬೈ ಹೈಕೋರ್ಟ್ ಕಂಗನಾ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸುವ ಸಾಧ್ಯತೆಯಿದೆ.
ಶಿವಸೇನೆ  ನಾಯಕರ ಜೊತೆ ತಾವು ಸೈದ್ಧಾಂತಿಕ ಭಿನ್ನತೆ ಹೊಂದಿರುವುದಕ್ಕೆ ಮಹಾರಾಷ್ಟ್ರ ಸರ್ಕಾರ ತಮ್ಮನ್ನು ಗುರಿಯಾಗಿಟ್ಟುಕೊಂಡು ಈ ಕೆಲಸ ಮಾಡುತ್ತಿದೆ ಎಂದು 33 ವರ್ಷದ ನಟಿ ಕಂಗನಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!