ದೇಶ

'ಮೇಕ್ ಇನ್ ಇಂಡಿಯಾ'ಅಭಿಯಾನಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ: ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ

Sumana Upadhyaya

ಅಂಬಾಲಾ ವಾಯುನೆಲೆ(ಹರ್ಯಾಣ): ಇಂದು ನಮ್ಮ ದೇಶಕ್ಕೆ ಒಂದು ಸಾಧನೆಯ ದಿನ. ಭಾರತ-ಫ್ರಾನ್ಸ್ ರಕ್ಷಣಾ ಸಂಬಂಧ ವಿಚಾರದಲ್ಲಿ ಎರಡೂ ದೇಶಗಳು ಒಂದಾಗಿ ಇಂದು ಹೊಸ ಅಧ್ಯಾಯವನ್ನು ಬರೆಯುತ್ತಿವೆ ಎಂದು ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ ಇಂದು ಅವರು ಕೂಡ ಸಾಕ್ಷಿಯಾದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗಿಂತ ಮೊದಲು ಮಾತನಾಡಿದ ಫ್ರಾನ್ಸ್ ರಕ್ಷಣಾ ಪಡೆ ಸಚಿವೆ, ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ನಮ್ಮ ಜಾಗತಿಕ ಮಟ್ಟದ ಪೂರೈಕೆ ಕೊಂಡಿಯಲ್ಲಿ ಭಾರತದ ಉತ್ಪಾದಕರ ಜೊತೆಗೆ ನಾವು ಮತ್ತಷ್ಟು ಐಕ್ಯತೆ, ಸಮಗ್ರತೆ ಹೊಂದಲು ಇಚ್ಛಿಸುತ್ತೇವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.

ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ಲಾರೆನ್ಸ್ ಪಾರ್ಲಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

SCROLL FOR NEXT