ಅಮಿತ್ ಶಾ 
ದೇಶ

ಗೋಲ್ಡನ್ ಟೆಂಪಲ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಅನುಮತಿ, ಉತ್ತಮ ನಿರ್ಧಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಹರ್ಮಂದೀರ್ ಸಾಹಿಬ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಪ್.ಸಿ.ಆರ್.ಎ) ಅನುಮತಿ ನೀಡಿರುವುದು ಒಂದು ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ನವದೆಹಲಿ: ಹರ್ಮಂದೀರ್ ಸಾಹಿಬ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಪ್.ಸಿ.ಆರ್.ಎ) ಅನುಮತಿ ನೀಡಿರುವುದು ಒಂದು ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

“ಶ್ರೀ ದರ್ಬಾರ್ ಸಾಹಿಬ್ ಅವರ ದೈವತ್ವವು ನಮಗೆ ಬಲ ನೀಡುತ್ತದೆ. ದಶಕಗಳಿಂದ, ವಿಶ್ವಾದ್ಯಂತ ಇರುವ ಸಂಘಟನೆಗೆ ಅಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹರ್ಮಂದಿರ್ ಸಾಹಿಬ್ ಗೆ ಅವಕಾಶ ನೀಡುವ ಮೋದಿ ಸರ್ಕಾರದ ನಿರ್ಧಾರ ಜಾಗತಿಕವಾಗಿ ಸಂಗತ್ ಮತ್ತು ದರ್ಬಾರ್ ಸಾಹಿಬ್ ನಡುವಿನ ಸೇವಾ  ಸಂಪರ್ಕವನ್ನು ಗಾಢವಾಗಿಸುತ್ತದೆ. ಇದೊಂದು ಧನ್ಯತೆಯ ಕ್ಷಣ” ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. “ ಇದು ಮತ್ತೊಮ್ಮೆ ನಮ್ಮ ಸಿಖ್ ಸೋದರಿ, ಸೋದರರ ಸೇವೆಯ ಅತ್ಯುತ್ತಮ ಮನೋಭಾವವನ್ನು ತೋರಿಸುತ್ತದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಬುಧವಾರ ಪಂಜಾಬ್ ನ ಸಚ್ಖಂಡ್ ಹರ್ಮಂದಿರ್ ಸಾಹಿಬ್, ದರ್ಬಾರ್ ಸಾಹಿಬ್ ಗೆ ನೋಂದಣಿಗೆ ಅನುಮತಿ ನೀಡಿತು. ಈ ಸಂಘ ಮೇ 27 ರಂದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿತ್ತು. ನೋಂದಣಿಯು 5 ವರ್ಷಗಳವರೆಗೆ ಮಾನ್ಯತೆ  ಪಡೆದಿರುತ್ತದೆ.ಪಂಜಾಬ್ ನ ಅಮೃತಸರದ ಸ್ವರ್ಣ ಮಂದಿರ ಎಂದು ಜನಪ್ರಿಯವಾಗಿರುವ ಸಚ್ಖಂಡ್ ಹರ್ಮಂದೀರ್ ಸಾಹಿಬ್, ದರ್ಬಾರ್ ಸಾಹಿಬ್ ಎಂಬ ಹೆಸರಿನ ಸಂಘವನ್ನು 1925 ರಲ್ಲಿ ಸಿಖ್ ಗುರುದ್ವಾರ ಕಾಯ್ದೆ 1925 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಸಾರ್ವಜನಿಕರಿಗೆ, ಭಕ್ತರಿಗೆ ದಿನದ 24 ಗಂಟೆಯೂ ಉಚಿತ  ಅನ್ನದಾನ, ಬಡವರು ಮತ್ತು ನಿರ್ಗತಿಕರಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳು, ನಿರ್ಗತಿಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮತ್ತು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸೇವೆಗಳನ್ನು ಒದಗಿಸುವುದು ಈ ಸಂಘದ ಉದ್ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT