ದೇಶ

ಜಮ್ಮು-ಕಾಶ್ಮೀರದ ಕಥುವಾದಲ್ಲಿ 18 ವರ್ಷಗಳ ಬಳಿಕ ಕೃಷಿ ಚಟುವಟಿಕೆ ಪುನರಾರಂಭ

Srinivas Rao BV

ಕಥುವಾ: ಜಮ್ಮು-ಕಾಶ್ಮೀರದ ಕಥುವಾದ ಅಂತಾರಾಷ್ಟ್ರೀಯ ಗಡಿಯ ಝಿರೋ ಲೈನ್ ನಾದ್ಯಂತ ಬರೊಬ್ಬರಿ 18 ವರ್ಷಗಳ ಬಳಿಕ ಕೃಷಿ ಚಟುವಟಿಕೆ ಪ್ರಾರಂಭವಾಗಿದೆ. ಬಿಎಸ್ಎಫ್ ಹಾಗೂ ನಾಗರಿಕ ಆಡಳಿತದ ಸಹಕಾರದಿಂದಾಗಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. 

ಪಾಹರ್ಪುರ್ ಯಿಂದ ಹಿರಾನಗರ್ ಸೆಕ್ಟರ್ ನಲ್ಲಿರುವ ಲೋಂದಿ ವರೆಗಿರುವ 22 ಗಡಿ ಭಾಗದ ಗ್ರಾಮಗಳಲ್ಲಿ 8,000 ಎಕರೆಗಳ ಪ್ರದೇಶದಲ್ಲಿ ಪಾಕಿಸ್ತಾನದ ನಿರಂತರ ಕದನ ವಿರಾಮ ಉಲ್ಲಂಘನೆಯಿಂದಾಗಿ ಕೃಷಿ ಚಟುವಟಿಕೆಗಳು ನಡೆಯುತ್ತಿರಲಿಲ್ಲ.  ನೈಸರ್ಗಿಕವಾಗಿ ಬೆಳೆದಿರುವ ಹುಲ್ಲು ಹಾಗೂ ಪೊದೆಗಳು ಪಾಕಿಸ್ತಾನಕ್ಕೆ ಒಳನುಸುಳುಕೋರರನ್ನು ಭಾರತಕ್ಕೆ ಕಳಿಸುವುದಕ್ಕೆ ಹಾಗೂ ಸುರಂಗ ಕೊರೆಯುವುದಕ್ಕೆ ಸಹಕಾರಿಯಾಗಿ ಭದ್ರತಾ ಅಪಾಯ ತಂದೊಡ್ಡಿತ್ತು. 

ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಕೃಷಿ ಭೂಮಿಯನ್ನು ಉಳುಮೆ ಮಾಡಿ ಕೃಷಿಗೆ ಯೋಗ್ಯವಾಗುವಂತೆ ಮಾಡಲಾಗಿದೆ ಎಂದು ಕಥುವಾ ಜಿಲ್ಲಾ ಅಭಿವೃದ್ಧಿ ಆಯುಕ್ತ ಒಪಿ ಭಗತ್ ಹೇಳಿದ್ದಾರೆ. 

ಮೊದಲ ಹಂತದಲ್ಲಿ 150 ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿದೆ ನಂತರದ ದಿನಗಳಲ್ಲಿ 8,000 ಎಕರೆಯಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗಲಿದೆ. ಗುಂಡು ನಿರೋಧಕ ಟ್ರಾಕ್ಟರ್ ಗಳನ್ನು ಬಳಸಿ ಬಿಎಸ್ ಎಫ್ ಭೂಮಿ ಉಳುಮೆ ಮಾಡಿದೆ. 

SCROLL FOR NEXT