ದೇಶ

ಸಲಿಂಗ ವಿವಾಹ ಭಾರತೀಯ ಸಂಸ್ಕೃತಿ ಮತ್ತು ಕಾನೂನಿನ ಭಾಗವಲ್ಲ: ಸಾಲಿಸಿಟರ್ ಜನರಲ್

Shilpa D

ನವದೆಹಲಿ: ಸಲಿಂಗ ವಿವಾಹಗಳು ಭಾರತೀಯ ಸಂಸ್ಕೃತಿಯ ಭಾಗವಲ್ಲ ಅಥವಾ ಕಾನೂನಿನ ಒಂದು ಅಂಗವಾಗಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ದೆಹಲಿ ಹೈಕೋರ್ಟ್‌ಗೆ ಹೇಳಿದ್ದಾರೆ.

ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗ ಸಮುದಾಯಕ್ಕೆ ಮದುವೆ ಹಕ್ಕು ನೀಡುವಂತೆ ಒತ್ತಾಯಿಸುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ವಿರೋಧಿಸಿದ್ದಾರೆ.

ಎಲ್ ಜಿಬಿಟಿಓ ಸಮುದಾಯದ ಅಭಿಜಿತ್ ಅಯ್ಯರ್ ಮಿತ್ರ, ಗೋಪಿ ಶಂಕರ್ ಎಂ, ಗಿತಿ ತದಾನಿ ಮತ್ತು ಊರ್ವಶಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದರು.  ಸುಪ್ರೀಂ ಕೋರ್ಟ್ ಒಮ್ಮತದ ಸಲಿಂಗಕಾಮಿ ವಿವಾಹವನ್ನುನಿರ್ಧರಿಸಿದ ನಂತರವೂ, ಸಲಿಂಗ ವ್ಯಕ್ತಿಗಳ ನಡುವಿನ ವಿವಾಹಗಳು ಇನ್ನೂ ಸಾಧ್ಯವಿಲ್ಲ ಎಂದು ವಾದಿಸಿದರು.

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ನಡೆದ ವಿಚಾರಣೆಯ ವೇಳೆ ಮೆಹ್ತಾ ಅವರು ವರದಿ ಸಲ್ಲಿಸಿದ್ದಾರೆ.

ಹಿಂದೂ ವಿವಾಹ ಕಾನೂನು ಪ್ರಕಾರ ಭಿನ್ನಲಿಂಗಿ ಅಥವಾ ಸಲಿಂಗ ವ್ಯಕ್ತಿಗಳು ಸೇರುವುದು ಬೇರೆ ಬೇರೆ ಎಂದು ಹೇಳಿಲ್ಲ, ಎರಡು ಹಿಂದುಗಳು ಕೂಡಿ ನಡೆಸುವ ದಾಂಪತ್ಯ ಎಂದು ವಿವರಿಸಿದ್ದಾರೆ. ಕಾನೂನಿಗೆ ತಿದ್ದುಪಡಿ ತರುವವರೆಗೂ ಇದನ್ನು  ಒಪ್ಪಲಾಗದು ಎಂದು ಹೇಳಿದ್ದಾರೆ.

ವಿಶ್ವದಾದ್ಯಂತ ಬದಲಾವಣೆಗಳು ನಡೆಯುತ್ತಿವೆ, ಮತ್ತು ಇಬ್ಬರು ಪುರುಷರು ವಿದೇಶದಲ್ಲಿ ಮದುವೆಯಾದಾಗ ಅವರಲ್ಲಿ ಯಾರನ್ನೂ ಹೆಂಡತಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಜಲನ್ ಹೇಳಿದ್ದಾರೆ.

ಸಲಿಂಗ ವಿವಾಹಗಳನ್ನು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸಿದ್ದರಿಂದ ಬೇಸರಗೊಂಡ ಸಮುದಾಯದ ಸದಸ್ಯರಿಂದ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಅರ್ಜಿದಾರರಿಗೆ ಸೂಚಿಸಿದೆ. ಮತ್ತು ಅಕ್ಟೋಬರ್ 21 ಕ್ಕೆ ವಿಚಾರಣೆಯನ್ನು ಮುಂದೂಡಿದೆ. 

SCROLL FOR NEXT