ದೇಶ

ಹರ್ಷವರ್ಧನ್ ಪ್ರಧಾನಿಯನ್ನು ಮಾತ್ರ ಅಭಿನಂದಿಸಿದ್ದಾರೆ, ಕೊರೋನಾ ವಾರಿಯರ್ ಗಳನ್ನು ಮರೆತಿದ್ದಾರೆ: ಟಿಎಂಸಿ ಸಂಸದ

Lingaraj Badiger

ನವದೆಹಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತ್ರ ಅಭಿನಂದಿಸಿ, ರಾಜ್ಯ ಸರ್ಕಾರಗಳು ಮತ್ತು ಕೊರೋನಾ ವಾರಿಯರ್ ಗಳನ್ನು ಮರೆತಿದ್ದಾರೆ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.

ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸದಿದ್ದಕ್ಕಾಗಿ ಮತ್ತು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ವಾರಿಯರ್ ಗಳನ್ನು ಸ್ಮರಿಸದ ಹರ್ಷವರ್ಧನ್ ನಡೆಯನ್ನು ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಚಿವರು ರಾಜ್ಯಸಭೆಯಲ್ಲಿ 12 ಪುಟಗಳ ಹೇಳಿಕೆಯನ್ನು ಓದಿದ್ದಾರೆ. ಈ ಸಂದರ್ಭದಲ್ಲಿ ಅವರು ಒಮ್ಮೆ ಮಾತ್ರ ಅಭಿನಂದನೆ ಎಂಬ ಪದವನ್ನು ಬಳಸಿದ್ದಾರೆ. ನಾಳೆ ಬೆಳಗ್ಗೆ ನಮಗೆ ಸ್ಪಷ್ಟೀಕರಣಗಳನ್ನು ಕೇಳಲು ಅವಕಾಶ ಸಿಗುತ್ತದೆ. ಆರೋಗ್ಯ ಸಚಿವರು ಒಮ್ಮೆ ಅಭಿನಂದನೆ ಎಂಬ ಪದವನ್ನು ಬಳಸಿದ್ದಾರೆ. ಅವರು ಯಾರನ್ನು ಅಭಿನಂದಿಸಿದರು? ಅದು ಪ್ರಧಾನ ಮಂತ್ರಿ. ವೈದ್ಯರು, ಆರೋಗ್ಯ ಕಾರ್ಯಕರ್ತರು, ದಾದಿಯರು, ಪೊಲೀಸರು, ವಾರ್ಡ್ ಹುಡುಗರು, ಸ್ವೀಪರ್ಗಳನ್ನು ಏಕೆ ಅಭಿನಂದಿಸಲಿಲ್ಲ ಎಂದು ಪ್ರಶ್ನಿಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ಅಭಿನಂದಿಸಲು ಅವರು ಸ್ವಲ್ಪ ಉದಾರವಾಗಿರಲು ಸಾಧ್ಯವಿಲ್ಲವೇ? ಅಥವಾ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಲು ಸಮಯ ಇಲ್ಲವೇ?. ನಿಮ್ಮ ಹೇಳಿಕೆಯಲ್ಲಿ ರಾಜ್ಯ ಸರ್ಕಾರಗಳಿಗೆ ಒಂದು ಧನ್ಯವಾದ ಸಹ ಇಲ್ಲ ಎಂದು ಟಿಎಂಸಿ ಸಂಸದ ವಾಗ್ದಾಳಿ ನಡೆಸಿದರು.

SCROLL FOR NEXT