ಅಜಿತ್ ದೋವಲ್ 
ದೇಶ

ಪಾಕಿಸ್ತಾನ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ: ಶಾಂಘೈ ಸಹಕಾರ ಸಭೆಯನ್ನು ಬಹಿಷ್ಕರಿಸಿದ ಭಾರತದ ಎನ್ಎಸ್ಎ ದೋವಲ್! 

ಶಾಂಘೈ ಸಹಕಾರ ಸಭೆಯಲ್ಲಿ ಜಮ್ಮು-ಕಾಶ್ಮೀರವನ್ನೊಳಗೊಂಡ ಪಾಕ್ ನಕ್ಷೆಯನ್ನು ಪ್ರದರ್ಶಿಸಿದ್ದನ್ನು ಪ್ರತಿಭಟಿಸಿ ಎನ್ಎಸ್ಎ ಅಜಿತ್ ದೋವಲ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ. 

ನವದೆಹಲಿ: ಶಾಂಘೈ ಸಹಕಾರ ಸಭೆಯಲ್ಲಿ ಜಮ್ಮು-ಕಾಶ್ಮೀರವನ್ನೊಳಗೊಂಡ ಪಾಕ್ ನಕ್ಷೆಯನ್ನು ಪ್ರದರ್ಶಿಸಿದ್ದನ್ನು ಪ್ರತಿಭಟಿಸಿ ಎನ್ಎಸ್ಎ ಅಜಿತ್ ದೋವಲ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ. ಸಭೆಯನ್ನು ಆಯೋಜಿಸಿದ್ದ ರಷ್ಯಾದ ಸಲಹೆ-ಸೂಚನೆಗಳನ್ನು ಧಿಕ್ಕರಿಸಿ ಪಾಕಿಸ್ತಾನ ವಿವಾದಾತ್ಮಕ ನಕ್ಷೆಯನ್ನು ಪ್ರದರ್ಶಿಸಿತ್ತು. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, "ಪಾಕಿಸ್ತಾನದ ಎನ್ಎಸ್ಎ ಡಾ. ಮೊಯೀದ್ ಯೂಸೂಫ್ ಅವರು ಭಾಗಿಯಾಗಿದ್ದ ವರ್ಚ್ಯುಯಲ್ ಸಭೆಯ ಹಿಂಬದಿಯಲ್ಲಿ ಜಮ್ಮು-ಕಾಶ್ಮೀರ, ಗುಜರಾತ್ ನ ಜುನಾಗಢ್ ನ್ನೊಳಗೊಂಡ ನಕ್ಷೆಯನ್ನು ತೋರಿಸಲಾಗಿತ್ತು ಇದನ್ನು ಗಮನಿಸಿದ  ಎನ್ಎಸ್ಎ ಅಜಿತ್ ದೋವಲ್ ಅವರು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ" ಎಂದು ತಿಳಿಸಿದ್ದಾರೆ. 

ಈ ರೀತಿಯ ನಕ್ಷೆಯನ್ನು ತೋರಿಸುವ ಮೂಲಕ ಪಾಕಿಸ್ತಾನ ಅತಿಥೆಯ ರಾಷ್ಟ್ರದ ನಿಬಂಧನೆಗಳನ್ನು ಉಲ್ಲಂಘಿಸಿ ರಷ್ಯಾಗೆ ಅವಮಾನ ಮಾಡಿದೆ, ಈ ಬಗ್ಗೆ ರಷ್ಯಾ ಎನ್ಎಸ್ಎ ಜೊತೆ ಮಾತನಾಡಿ ಅಜಿತ್ ದೋವಲ್ ಅವರು ಸಭೆ ಬಹಿಷ್ಕರಿಸಿದ್ದಾರೆಂದು ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. 

ಆದರೆ ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ತನ್ನ ಹೊಸ ರಾಜಕೀಯ ನಕ್ಷೆ ವಿಚಾರದಲ್ಲಿ ಎಸ್ ಸಿಒದಿಂದ ಸಂಪೂರ್ಣ ಒಪ್ಪಿಗೆ ಇತ್ತು ಎಂದು ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz closure: ಹಾರ್ಮುಜ್ ಜಲಸಂಧಿ ಬಂದ್, ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತ ಹಡಗುಗಳು!

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ರಾಜ್ಯ ಸರ್ಕಾರ ನಿಯಮದ ಮಿತಿಯೊಳಗೆ ಸಾಲ ಮಾಡಿದೆ: ಸಿಎಂ ಸಿದ್ದರಾಮಯ್ಯ ಸಮರ್ಥನೆ

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಹೆಚ್ಚುತ್ತಿರುವ ಸಬ್ಸಿಡಿ: ಗ್ರಾಮ ಪಂಚಾಯಿತಿ ಅನುದಾನಕ್ಕೆ ರಾಜ್ಯ ಸರ್ಕಾರ ಕೊಕ್- CAG ವರದಿ

SCROLL FOR NEXT