ಪ್ರಧಾನಿ ಮೋದಿ 
ದೇಶ

ಪ್ರಧಾನಿ ಮೋದಿ ಹುಟ್ಟುಹಬ್ಬ: 'ನಮೋ ಬಗ್ಗೆ ತಿಳಿಯಿರಿ' ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ ಬಿಜೆಪಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಬಿಜೆಪಿಯು ‘ನಮೋ ಬಗ್ಗೆ ತಿಳಿಯಿರಿ’ ರಸಪ್ರಶ್ನೆ ಸ್ಪರ್ಧೆಯನ್ನು ಗುರುವಾರ ಆಯೋಜಿಸಿದೆ. 

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಬಿಜೆಪಿಯು ‘ನಮೋ ಬಗ್ಗೆ ತಿಳಿಯಿರಿ’ ರಸಪ್ರಶ್ನೆ ಸ್ಪರ್ಧೆಯನ್ನು ಗುರುವಾರ ಆಯೋಜಿಸಿದೆ. 

ಈ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಪ್ರಧಾನಿ ಮೋದಿಯವರ ಸಹಿ ಇರುವ ಪುಸ್ತಕಗಳು ಬಹುಮಾನವಾಗಿ ಸಿಗಲಿವೆ ಎಂದು ತಿಳಿಸಿದೆ.

ರಸಪ್ರಶ್ನೆ ಸ್ಪರ್ಧೆ ಇಂದು ಆರಂಭವಾಗಿದ್ದು, ಸ್ಪರ್ಧೆಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಸ್ಪರ್ಧೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಬಿಜೆಪಿಯು, ‘ಪ್ರಧಾನಿ ಮೋದಿ ಅವರ ಬಗ್ಗೆ ನಿಮಗೆಷ್ಟು ಗೊತ್ತು? ನಮೋ ಆ್ಯಪ್‌ನಲ್ಲಿ ‘ನಮೊ ಬಗ್ಗೆ ತಿಳಿಯಿರಿ ಕ್ವಿಜ್‌’ನಲ್ಲಿ ಭಾಗವಹಿಸಿ. ವಿಜೇತರು ನರೇಂದ್ರ ಮೋದಿ ಅವರ ಸಹಿ ಇರುವ ಪುಸ್ತಕವನ್ನು ಬಹುಮಾನ ಪಡೆಯಲಿದ್ದೀರಿ’ ಎಂದು ಟ್ವೀಟ್‌ ಮಾಡಿದೆ.

ಜೊತೆಗೆ ನಮೋ ಆ್ಯಪ್‌ ಮೂಲಕ ಪ್ರಧಾನಿ ಅವರಿಗೆ ಶುಭಾಶಯಗಳನ್ನು ತಿಳಿಸುವಂತೆಯೂ ಮನವಿ ಮಾಡಿರುವ ಬಿಜೆಪಿ, ‘ನೀವು ಮೋದಿ ಅವರಿಗೆ ಶುಭಾಶಯ ತಿಳಿಸಲು ಬಯಸುವುದಾದರೆ, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ನಂತರ ವಿಡಿಯೊ ಚಿತ್ರೀಕರಿಸಿ ಅಪ್‌ಲೋಡ್‌ ಮಾಡಿ‌’ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT