ದೇಶ

ರಿಯಾ ಚಕ್ರವರ್ತಿ ಡ್ರಗ್ ಕೇಸು: ಮಾಧ್ಯಮ ವರದಿ ತಡೆಗೆ ನಟಿ ರಾಕುಲ್ ಮನವಿ, ಕೇಂದ್ರದ ನಿಲುವು ಕೇಳಿದ ದೆಹಲಿ ಹೈಕೋರ್ಟ್

Sumana Upadhyaya

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಯಾ ಚಕ್ರವರ್ತಿ ಡ್ರಗ್ ಕೇಸಿನಲ್ಲಿ ತಮ್ಮ ಹೆಸರನ್ನು ಮಾಧ್ಯಮಗಳು ಥಳಕು ಹಾಕುತ್ತಿವೆ ಎಂದು ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವರದಿಗಳು ಸುಳ್ಳಾಗಿದ್ದು ಇದಕ್ಕೆ ತಡೆಯೊಡ್ಡಬೇಕೆಂದು ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಇನ್ನು ನಟಿ ಮಾಡಿಕೊಂಡಿರುವ ಮನವಿ ಬಗ್ಗೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ನಟಿ ರಾಕುಲ್ ಪ್ರೀತ್ ಸಿಂಗ್ ಪರ ನ್ಯಾಯವಾದಿ ನವೀನ್ ಚಾವ್ಲಾ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಪ್ರಸಾರ ಭಾರತಿ, ಭಾರತೀಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ನೊಟೀಸ್ ನೀಡಿದ್ದು, ಈ ಕುರಿತು ತಮ್ಮ ನಿಲುವು ಏನು ಎಂದು ಕೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು/ಸಂಸ್ಥೆಗಳು ರಾಕುಲ್ ಅವರ ಮನವಿಯನ್ನು ಪ್ರಾತಿನಿಧ್ಯವೆಂದು ಪರಿಗಣಿಸಿ ಮುಂದಿನ ವಿಚಾರಣೆ ವೇಳೆ ಅಕ್ಟೋಬರ್ 15ರೊಳಗೆ ತೀರ್ಮಾನಕ್ಕೆ ಬರುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.

ಮಾಧ್ಯಮ ಸಂಸ್ಥೆಗಳು ನಟಿ ರಾಕುಲ್ ಪ್ರೀತ್ ಸಿಂಗ್ ಕುರಿತ ಸುದ್ದಿಗಳನ್ನು ಹಾಕುವಾಗ ನಿರ್ಬಂಧ ಕಾಪಾಡುವಂತೆ, ಟಿವಿ ನಿಯಂತ್ರಣ, ಕಾರ್ಯಕ್ರಮ ನಿಯಮ ಮತ್ತು ಹಲವು ಮಾರ್ಗಸೂಚಿಗಳು, ಶಾಸನಬದ್ಧ ಮತ್ತು ಸ್ವಯಂ ನಿಯಂತ್ರಣವನ್ನು ಪಾಲಿಸಿಕೊಂಡು ಹೋಗುವಂತೆ ಸಹ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿದೆ.

ರಿಯಾ ಚಕ್ರವರ್ತಿ ಈಗಾಗಲೇ ಡ್ರಗ್ ಕುರಿತ ತಮ್ಮ ಹೇಳಿಕೆಯಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ, ಆದರೂ ಮಾಧ್ಯಮಗಳು ಅವರ ಬಗ್ಗೆ ಡ್ರಗ್ ಕೇಸಿನಲ್ಲಿ ವರದಿಗಳನ್ನು ನೀಡುತ್ತಲೇ ಇವೆ, ಇದಕ್ಕೆ ತಡೆಯೊಡ್ಡಬೇಕೆಂದು ನಟಿಯ ಪರ ವಕೀಲ ಅಮನ್ ಹಿಂಗೊರನಿ ಒತ್ತಾಯಿಸಿದ್ದಾರೆ.

SCROLL FOR NEXT