ವಿಧಾನಸೌಧ 
ದೇಶ

ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಕುಸಿದ ಭಾರತದ ನಗರಗಳು: ಅಗ್ರಸ್ಥಾನದಲ್ಲಿ ಸಿಂಗಾಪುರ!

ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಕುಸಿಯುತ್ತಿದ್ದು ಸಿಂಗಾಪುರ ಸ್ಥಾನ ಪಡೆದಿದೆ.

ನವದೆಹಲಿ: ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಕುಸಿಯುತ್ತಿದ್ದು ಸಿಂಗಾಪುರ ಸ್ಥಾನ ಪಡೆದಿದೆ. 

ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್(ಐಎಮ್‌ಡಿ), ಸಿಂಗಾಪುರ್ ಯೂನಿವರ್ಸಿಟಿ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (ಎಸ್‌ಯುಟಿಡಿ) ಸಹಯೋಗದೊಂದಿಗೆ 2020ರ ಸ್ಮಾರ್ಟ್ ಸಿಟಿ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಕೋವಿಡ್ 19 ಯುಗದಲ್ಲಿ ತಂತ್ರಜ್ಞಾನವು ಹೇಗೆ ಪಾತ್ರವಹಿಸುತ್ತಿದೆ ಎಂಬುದರ ಕುರಿತು ಪ್ರಮುಖ ಆವಿಷ್ಕಾರಗಳನ್ನು ಹೊಂದಿದೆ.

2020ರ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಹೈದರಾಬಾದ್ 85ನೇ ಸ್ಥಾನದಲ್ಲಿದೆ (2019ರಲ್ಲಿ 67ನೇ ಸ್ಥಾನದಲ್ಲಿತ್ತು), ನವದೆಹಲಿ 86 ನೇ ಸ್ಥಾನದಲ್ಲಿದೆ (2019ರಲ್ಲಿ 68ನೇ ಸ್ಥಾನ ಪಡೆದಿತ್ತು), ಮುಂಬೈ 93ನೇ ಸ್ಥಾನದಲ್ಲಿದೆ (2019ರಲ್ಲಿ ಅದು 78ನೇ ಸ್ಥಾನದಲ್ಲಿತ್ತು) ಮತ್ತು ಬೆಂಗಳೂರು 95ನೇ ಸ್ಥಾನದಲ್ಲಿದೆ(2019 ರಲ್ಲಿ 79ನೇ ಸ್ಥಾನ ಪಡೆದಿತ್ತು).

ಭಾರತದ ನಗರಗಳಾದ(ನವದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು) ಈ ವರ್ಷ ಗಮನಾರ್ಹ ಕುಸಿತವನ್ನು ಕಂಡಿವೆ. ತಾಂತ್ರಿಕ ಪ್ರಗತಿಯು ನವೀಕೃತವಾಗಿಲ್ಲದಿರುವಲ್ಲಿ ಸಾಂಕ್ರಾಮಿಕ ರೋಗವು ಉಂಟುಮಾಡಿದ ಹಾನಿಕಾರಕ ಪರಿಣಾಮಕ್ಕೆ ಇದು ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಭಾರತೀಯ ನಗರಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿವೆ ಏಕೆಂದರೆ ಅವುಗಳು ಕೊರೋನಾ ವಿರುದ್ಧ ಹೋರಾಡಲು ಸಿದ್ಧವಾಗಿಲ್ಲ ಎಂದು ವರದಿಯಲ್ಲಿ ಹೇಳಿದೆ. 

ಬೆಂಗಳೂರು ಮತ್ತು ಮುಂಬೈನಂತಹ ನಗರಗಳಿಗೆ ಇದು ರಸ್ತೆ ದಟ್ಟಣೆಯನ್ನು ನಿಕಟವಾಗಿ ಅನುಸರಿಸಿದರೆ ದೆಹಲಿ ಮತ್ತು ಹೈದರಾಬಾದ್‌ಗೆ ಇದು ಮೂಲ ಸೌಕರ್ಯವಾಗಿದೆ ಎಂದು ವರದಿ ತಿಳಿಸಿದೆ.

2020 ಸ್ಮಾರ್ಟ್ ಸಿಟಿ ಇಂಡೆಕ್ಸ್ (ಎಸ್‌ಸಿಐ) ಸಿಂಗಾಪುರದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹೆಲ್ಸಿಂಕಿ ಮತ್ತು ಜುರಿಚ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಟಾಪ್ 10 ಪಟ್ಟಿಯಲ್ಲಿ ಆಕ್ಲೆಂಡ್(4ನೇ), ಓಸ್ಲೋ(5ನೇ ಸ್ಥಾನ), ಕೋಪನ್ ಹ್ಯಾಗನ್(6ನೇ ಸ್ಥಾನ), ಜಿನೀವಾ (7ನೇ ಸ್ಥಾನ), ತೈಪೆ ನಗರ (8ನೇ ಸ್ಥಾನ), ಆಮ್ಸ್ಟರ್‌ಡ್ಯಾಮ್ (9ನೇ ಸ್ಥಾನ) ಮತ್ತು ನ್ಯೂಯಾರ್ಕ್ 10ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT