ದೇಶ

ಆಯುಷ್ಮಾನ್ ಭಾರತ್ ಯೋಜನೆಯಡಿ 1.26 ಕೋಟಿ ರೋಗಿಗಳಿಗೆ ಉಚಿತ ಚಿಕಿತ್ಸೆ: ಡಾ. ಹರ್ಷವರ್ಧನ್

Nagaraja AB

ನವದೆಹಲಿ: ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ 2018 ರ ಸೆಪ್ಟೆಂಬರ್‌ನಲ್ಲಿ ಆರಂಭವಾದಾಗಿನಿಂದ ಒಟ್ಟಾರೆ 1.26 ಕೋಟಿ ಜನರು ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, 12 ಕೋಟಿ 50 ಲಕ್ಷಕ್ಕೂ ಹೆಚ್ಚು ಮಂದಿಗೆ ಇ-ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಹರ್ಷ್ ವರ್ಧನ್ ಹೇಳಿದ್ದಾರೆ.

ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಎರಡನೇ ವಾರ್ಷಿಕೋತ್ಸವದಂದು ಮಂಗಳವಾರ ಆರೋಗ್ಯ ಮಂಥನ್ 2.0 ಅಧ್ಯಕ್ಷತೆ ವಹಿಸಿದ್ದ ಡಾ.ಹರ್ಷ್‍ವರ್ಧನ್‍,  ಈ ಯೋಜನೆಯನ್ನು ಐತಿಹಾಸಿಕ ಹೆಜ್ಜೆ ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಎಂದು ಬಣ್ಣಿಸಿದರು.

 53 ಕೋಟಿಗೂ ಹೆಚ್ಚು ಆರ್ಥಿಕ ದುರ್ಬಲರಿಗೆ ಪ್ರತಿ ವರ್ಷ 5 ಲಕ್ಷ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಯಲ್ಲಿ ಉಚಿತ ಆರೋಗ್ಯ ವಿಮೆಯನ್ನು ಒದಗಿಸಲಾಗಿದೆ ಎಂದು ಹೇಳಿದರು.

‘ಇದುವರೆಗೆ 15,500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದ ಅವರು. ಇದು ಆರೋಗ್ಯ ರಕ್ಷಣೆಗಾಗಿ ದೊಡ್ಡ ವೆಚ್ಚಕ್ಕಿಂತ ಮುಖ್ಯವಾಗಿ ಬಡವರನ್ನು ಉಳಿಸುವ ಮೂಲಕ ಅವರ ಕುಟುಂಬಗಳನ್ನು ಕಾಪಾಡಿದೆ.ಯೋಜನೆಯ ಯಶಸ್ವಿಯಿಂದ ನಾನು ಪಡೆಯುತ್ತಿರುವ ಸಂತೋಷವನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ.’ ಎಂದು ಅವರು ಹೇಳಿದರು.

SCROLL FOR NEXT