ದೇಶ

ಭಾರತದ 37.6 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಿದ ಟಿಕ್ ಟಾಕ್ 

Srinivas Rao BV

ಚೀನಾದ ಕಿರು ವಿಡಿಯೋ ಮೇಕಿಂಗ್ ಆಪ್ ಟಿಕ್ ಟಾಕ್ ತನ್ನ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದ 104.5 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಿದೆ. 

ಈ ಪೈಕಿ 37.68 ಮಿಲಿಯನ್ ವಿಡಿಯೋಗಳು ಭಾರತದ್ದಾಗಿದೆ. ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಇದ್ದು 9.82 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಲಾಗಿದೆ. 

ತೆಗೆದುಹಾಕಲಾಗಿರುವ ವಿಡಿಯೋ ಟಿಕ್ ಟಾಕ್ ನಲ್ಲಿ ಒಟ್ಟಾರೆ ಅಪ್ ಲೋಡ್ ಆಗುವ ವಿಡಿಯೋಗಳ ಶೇ.1 ರಷ್ಟಾಗಿದೆ. ಭಾರತದಲ್ಲಿ ಟಿಕ್ ಟಾಕ್ ನಿಷೇಧವಾಗುವುದಕ್ಕೂ ಮುನ್ನ 200 ಮಿಲಿಯನ್ ಬಳಕೆದಾರರಿದ್ದರು.  ಇದು ಅಮೆರಿಕಾದ ಮಾರುಕಟ್ಟೆಯ ಎರಡರಷ್ಟಾಗಿತ್ತು. 

ಭಾರತವನ್ನು ಹೊರತುಪಡಿಸಿದರೆ ಟಿಕ್ ಟಾಕ್ ಗೆ ಅಮೆರಿಕ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಪಾಕಿಸ್ತಾನ, ಬ್ರೆಜಿಲ್, ಬ್ರಿಟನ್ ಗಳಿಂದ ಅನುಕ್ರಮವಾಗಿ 6.45 ಮಿಲಿಯನ್, 5.53 ಮಿಲಿಯನ್ ಹಾಗೂ 2.95 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಲಾಗಿದೆ. ಸರ್ಕಾರಗಳಿಂದ ಕಾನೂನು ಮನವಿ ಬಂದಿದ್ದ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ತೆಗೆದುಹಾಕಲಾಗಿದೆ.

SCROLL FOR NEXT