ಕಾರ್ಮಿಕ ವಿಧೇಯಕದಿಂದ ಟ್ರೇಡ್ ಯೂನಿಯನ್ ಗಳು ದುರ್ಬಲ, ಕಾರ್ಮಿಕರ ಭದ್ರತೆಗೆ ವಿರುದ್ಧ: ಕಾಂಗ್ರೆಸ್
ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಮಸೂದೆಗಳು ಕಾರ್ಮಿಕರ ಭದ್ರತಗೆ ವಿರುದ್ಧವಾಗಿದ್ದು, ಟ್ರೇಡ್ ಯೂನಿಯನ್ ಗಳನ್ನು ದುರ್ಬಲಗೊಳಿಸಲಿವೆ ಎಂದು ಕಾಂಗ್ರೆಸ್ ಹೇಳಿದೆ.
ನವದೆಹಲಿ: ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಮಸೂದೆಗಳು ಕಾರ್ಮಿಕರ ಭದ್ರತಗೆ ವಿರುದ್ಧವಾಗಿದ್ದು, ಟ್ರೇಡ್ ಯೂನಿಯನ್ ಗಳನ್ನು ದುರ್ಬಲಗೊಳಿಸಲಿವೆ ಎಂದು ಕಾಂಗ್ರೆಸ್ ಹೇಳಿದೆ.
ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆಯೇ ಸಿಬ್ಬಂದಿಗಳನ್ನು ಕಡಿತಗೊಳಿಸುವ ಅಧಿಕಾರದ ಮಿತಿಯನ್ನು ಈ ಹಿಂದಿದ್ದ 100 ರಿಂದ 300 ಕ್ಕೆ ಏರಿಕೆ ಮಾಡಲು ಹೊಸ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
ಕಾಂಗ್ರೆಸ್ ನ ಹಿರಿಯ ನಾಯಕ, ಕಾರ್ಮಿಕ ಇಲಾಖೆಯ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ವಿಧೇಯಕಗಳ ಬಗ್ಗೆ ಮಾತನಾಡಿದ್ದು, ಹೊಸ ಕಾನೂನಿನಿಂದ ಉದ್ಯಮ ಮಾಡುವುದು ಸರಳವಾಗಲಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.
ಟ್ರೇಡ್ ಯೂನಿಯನ್ ಗಳನ್ನು ಈ ಕಾನೂನಿನ ಮೂಲಕ ದುರ್ಬಲಗೊಳಿಸಲಾಗಿದೆ. ಕಾರ್ಮಿಕರ ಭದ್ರತೆಯನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಾಜ್ಯಗಳ ಅಧಿಕಾರವನ್ನೂ ಈ ಕಾನೂನಿನ ಮೂಲಕ ಕೇಂದ್ರ ಸರ್ಕಾರ ಕಸಿದುಕೊಂಡಿದೆ. ಈ ಕಾನೂನು ಕಾರ್ಮಿಕರ ವಿರೋಧಿ, ಇದನ್ನು ವಿರೋಧಿಸುವುದು ತುಂಬಾ ಮುಖ್ಯ, ಎಲ್ಲಾ ಪಕ್ಷಗಳೂ ಇದನ್ನು ವಿರೋಧಿಸಬೇಕು, ಮೋದಿ ಸರ್ಕಾರ ಕೇವಲ ಕಾರ್ಪೊರೇಟ್ ಗಳಿಗೆ ಬೆಂಬಲ ನೀಡುತ್ತದೆ ಎಂದು ಖರ್ಗೆ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.