ದೇಶ

ಐಎಸ್ ಐಎಸ್ ಉಗ್ರ ಸಂಘಟನೆ ಸೇರಿದ್ದ ಕೇರಳದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

Nagaraja AB

ಕೊಚ್ಚಿ: ಉದ್ದೇಶಪೂರ್ವಕವಾಗಿ ಗೊತ್ತಿದ್ದು ಐಎಸ್ ಐಎಸ್ ಉಗ್ರ ಸಂಘಟನೆ ಸೇರ್ಪಡೆಗೊಂಡು ತದನಂತರ ಉಗ್ರ ಗುಂಪಿನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಇರಾಕ್ ಗೆ ತೆರಳಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಗೆ ಕೊಚ್ಚಿಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಕೇಂದ್ರೀಯ ಭದ್ರತಾ ಸಂಸ್ಥೆಗಳು ಮತ್ತು ಇತರ ರಾಜ್ಯ ಪೊಲೀಸರ ಸಹಾಯದಿಂದ ತಮಿಳುನಾಡಿನಲ್ಲಿ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ 2016 ರಲ್ಲಿ ಎನ್‌ಐಎ ಬಂಧಿಸಿದ ಕೇರಳದ  ಸುಬಹಾನಿ ಹಜಾ ಮೊಯ್ದೀನ್‌ಗೆ ಎನ್‌ಐಎ ವಿಶೇಷ  ನ್ಯಾಯಾಲಯ 2,10,000 ರೂ. ದಂಡ ವಿಧಿಸಿದೆ.

ಐಪಿಸಿ ಸೆಕ್ಷನ್ 120 ( ಬಿ) ಅಪರಾಧ ಪಿತೂರಿ, ಸೆಕ್ಷನ್ 125 , ಕಾನೂನುಬಾಹಿರ ಚಟುವಟಿಕೆಗಳು, ಸೆಕ್ಷನ್ 20 (ಭಯೋತ್ಪಾದಕ ಗ್ಯಾಂಗ್ ಅಥವಾ ಸಂಘಟನೆಯ ಸದಸ್ಯರಾಗಿದ್ದಕ್ಕಾಗಿ ಶಿಕ್ಷೆ) ಅಡಿಯಲ್ಲಿ ಆತನನ್ನು ದೋಷಿ ಎಂದು ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿತ್ತು.

ಆದಾಗ್ಯೂ, ಐಪಿಸಿ ಸೆಕ್ಷನ್ 122 (ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಇತ್ಯಾದಿ) ಅಡಿಯಲ್ಲಿ ಮೊಯಿದೀನ್ ಅಪರಾಧಕ್ಕೆ ಗುರಿಯಾಗಲಿಲ್ಲ. 

ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ ಚಾರ್ಜ್‌ಶೀಟ್‌ನ ಪ್ರಕಾರ, ಇಡುಕ್ಕಿ ಜಿಲ್ಲೆಯವರಾದ ಮೊಯಿದೀನ್, ಉದ್ದೇಶಪೂರ್ವಕವಾಗಿ, ಗೂತ್ತಿದ್ದು ಏಪ್ರಿಲ್ 2015 ರಲ್ಲಿ ಐಎಸ್ ಐಎಸ್ ಸದಸ್ಯರಾಗಿದ್ದಾರೆ.

SCROLL FOR NEXT