ದೇಶ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ: ಸಿಬಿಐ

Nagaraja AB

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಮತ್ತು ಎಲ್ಲಾ ಅಂಶಗಳು ತನಿಖೆ ಹಂತದಲ್ಲಿದೆ ಎಂದು ತನಿಖಾ ತಂಡ ಸೋಮವಾರ ಹೇಳಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ  ವೃತ್ತಿಪರ ತನಿಖೆಯನ್ನು ನಡೆಸುತ್ತಿದೆ, ಇದರಲ್ಲಿ ಎಲ್ಲಾ ಅಂಶಗಳನ್ನು ಗಮನಿಸಲಾಗುತ್ತಿದೆ ಮತ್ತು ಇಲ್ಲಿಯವರೆಗೂ ಯಾವುದೇ ಅಂಶವನ್ನು ತಳ್ಳಿ ಹಾಕಿಲ್ಲ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏಳು ವರ್ಷಗಳ ಹಿಂದೆ ಕೈ ಪೊ ಚೆ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದ 34 ವರ್ಷದ ರಜಪೂತ್, ಈ ವರ್ಷದ ಜೂನ್ ನಲ್ಲಿ ಮುಂಬೈಯಲ್ಲಿನ ಬಾಂದ್ರಾದ ಅಪಾರ್ಟ್ ಮೆಂಟ್ ನಲ್ಲಿ ಮೃತಪಟ್ಟಿದ್ದರು.

ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ ಕೆ ಸಿಂಗ್ ಪಾಟ್ನಾದಲ್ಲಿ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ದಾಖಲಿಸಿದ್ದ ದೂರಿನ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ರಜಪೂತ್ ಸಂಪತ್ತನ್ನು ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬಸ್ಥರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಂಗ್ ಬಿಹಾರದಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದು, ನಿಧಾನಗತಿಯ ಸಿಬಿಐ ತನಿಖೆ ಬಗ್ಗೆ ಸಿಂಗ್ ಪರ ವಕೀಲರು ಕಲೆದ ವಾರ ಅಸಹಾಯಕತೆ ವ್ಯಕ್ತಪಡಿಸಿದ್ದರು.

ಸಿಬಿಐ ವಕ್ತಾರರು ಅಥವಾ ಯಾವುದೇ ತಂಡದ ಸದಸ್ಯರು ತನಿಖೆಯ ಯಾವುದೇ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ. ಸಿಬಿಐಗೆ ವರದಿ ಮಾಡಲಾದ ಮತ್ತು ಆರೋಪಿಸಲಾದ ವಿವರಗಳು ವಿಶ್ವಾಸಾರ್ಹವಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT