ನಿರ್ಭಯಾ ಕ್ಷಿಪಣಿ 
ದೇಶ

ತಂತ್ರಕ್ಕೆ ಪ್ರತಿತಂತ್ರ: ಚೀನಾಗೆ ಸೆಡ್ಡು ಹೊಡೆಯಲು ಗಡಿಯಲ್ಲಿ ಸಬ್ ಸಾನಿಕ್ 'ನಿರ್ಭಯಾ ಕ್ಷಿಪಣಿ' ನಿಯೋಜಿಸಿದ ಭಾರತ!

ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ ನಿಯೋಜಿಸಿದೆ.

ನವದೆಹಲಿ: ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ ನಿಯೋಜಿಸಿದೆ. 

ಟಿಬೆಟ್ ಹಾಗೂ ಕ್ಸಿನ್ ಝಿಯಾಂಗ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಸುಮಾರು 2 ಸಾವಿರ ಕಿಲೋಮೀಟರ್ ದೂರ ಸಾಗಿ ಶತ್ರು ಪಾಳಯದ ಗುರಿಯನ್ನು ಭೇದಿಸಬಲ್ಲ ಕ್ಷಿಪಣಿಗಳನ್ನು ನಿಯೋಜಿಸಿದ್ದು ಇದಕ್ಕೆ ಪ್ರತಿಯಾಗಿ ಭಾರತ ಸಹ ಕ್ಷಿಪಣಿಗಳನ್ನು ನಿಯೋಜಿಸಿದೆ. 

ಪೂರ್ವ ಲಡಾಖ್ ನಲ್ಲಿ 500 ಕಿ.ಮೀ ದೂರಕ್ಕೆ ಸಾಗಬಲ್ಲ ಬ್ರಹ್ಮೋಸ್, ನಿರ್ಭಯಾ, 40 ಕಿ.ಮೀ ಅಂತರವನ್ನು ಭೇದಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಗಳನ್ನು ಭಾರತೀಯ ಸೇನೆ ನಿಯೋಜಿಸಿದೆ. 

ಪೂರ್ವ ಲಡಾಕ್ ನ ಹಲವು ಘರ್ಷಣೆ ಕೇಂದ್ರಗಳಲ್ಲಿ ಯಥಾಸ್ಥಿತಿ ಮುಂದುವರಿದಿದ್ದು ಭಾರತೀಯ ಸೇನಾಪಡೆ ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ವಿಶೇಷವಾಗಿ ವಾಯುಪಡೆ ಚೀನಾದ ಸೇನಾಪಡೆಯ ಯಾವುದೇ ದುಸ್ಸಾಹಸವನ್ನು ಎದುರಿಸಲು ಬದ್ಧವಾಗಿದೆ ಮತ್ತು ಸಿದ್ದವಾಗಿದೆ.

ಭವಿಷ್ಯದಲ್ಲಿ ಯಾವುದೇ ರೀತಿಯ ಸಂಘರ್ಷ ಎದುರಾದರೂ ಅವುಗಳನ್ನು ಎದುರಿಸಲು, ಗೆಲುವು ಕಾಣುವಲ್ಲಿ ಭಾರತೀಯ ವಾಯುಪಡೆಯ ಪಾತ್ರ ವಿಶೇಷ ಮಹತ್ವದ್ದಾಗಿದೆ. ಹೀಗಾಗಿ ಸೂಪರ್ ಸಾನಿಕ್ ಬ್ರಹ್ಮೋಸ್, ಸಬ್ ಸಾನಿಕ್ ನಿರ್ಭಯ್ ಹಾಗೂ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಮೃತಪಟ್ಟ ಎಲ್ಲಾ ಏಳು ಮಂದಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ-Video

ಜಾರ್ಖಂಡ್‌ ಸಮೀಪ ಚಾತ್ರಾದಲ್ಲಿ ಪತನಗೊಂಡ ರಾಂಚಿ–ದೆಹಲಿ ಏರ್ ಆಂಬ್ಯುಲೆನ್ಸ್: ಎಲ್ಲಾ 7 ಮಂದಿ ಸಾವು-Video

Road Rage Shocker: ಕ್ಷುಲ್ಲಕ ಜಗಳ, ಕುಟುಂಬದ ಮೇಲೆ ಕಾರು ಹರಿಸಿದ ಡಿಎಂಕೆ ನಾಯಕನ ಪುತ್ರ, ಓರ್ವ ಸಾವು, ಹಲವರಿಗೆ ಗಾಯ

CM ಪಟ್ಟ ಜಟಾಪಟಿ: ಮತ್ತಷ್ಟು ಹರಿತವಾಯ್ತು ದಲಿತ ಸಿಎಂ ಅಸ್ತ್ರ, DKS ವಿರುದ್ಧ ಸಿದ್ದು ಬಣ ಪ್ರತಿತಂತ್ರ..!

ರಂಜಾನ್, ಹೋಳಿ ಹಬ್ಬ: ಶಾಂತಿ ಕದಡಿದರೆ ಕಠಿಣ ಕ್ರಮ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಖಡಕ್ ಸೂಚನೆ

SCROLL FOR NEXT