ಭಾರತೀಯ ಸೇನೆ 
ದೇಶ

ಪ್ರತ್ಯೇಕ ಎನ್‌ಕೌಂಟರ್: ಎಜಿಎಚ್ ಮುಖ್ಯಸ್ಥ ಸೇರಿ 7 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ದೊಡ್ಡ ಯಶಸ್ಸು ಸಾಧಿಸಿದ್ದು ಅನ್ಸಾರ್ ಘಜ್ವಾತ್-ಉಲ್ ಹಿಂದ್(ಎಜಿಎಚ್) ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹೊಡೆದುರುಳಿಸಿದೆ.

ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ದೊಡ್ಡ ಯಶಸ್ಸು ಸಾಧಿಸಿದ್ದು ಅನ್ಸಾರ್ ಘಜ್ವಾತ್-ಉಲ್ ಹಿಂದ್(ಎಜಿಎಚ್) ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹೊಡೆದುರುಳಿಸಿದೆ. 

ಪುಲ್ವಾಮಾ ಮತ್ತು ಶೋಪಿಯಾನ್ ನಲ್ಲಿ ಭಾರತೀಯ ಸೇನೆ ಪ್ರತ್ಯೇಕ ಎನ್‌ಕೌಂಟರ್ ನಡೆಸಿದ್ದು ಶೋಪಿಯಾನ್ ನಲ್ಲಿ ಐವರು ಹಾಗೂ ಪುಲ್ವಾಮಾದಲ್ಲಿ ಇಬ್ಬರನ್ನು ಹೊಡೆದುರುಳಿಸಿದೆ. 

ಎನ್‌ಕೌಂಟರ್ ನಲ್ಲಿ ಎಜಿಎಚ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಶಾ ಸೇರಿದಂತೆ ಏಳು ಭಯೋತ್ಪಾದಕರನ್ನು  ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಲ್ಭಾಗ್ ಸಿಂಗ್ ಹೇಳಿದ್ದಾರೆ. 

ಮೊದಲ ಎನ್‌ಕೌಂಟರ್ ನಲ್ಲಿ ಐವರು ಭಯೋತ್ಪಾದಕರು ಮತ್ತು ಎರಡನೇ ಎನ್‌ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ 7 ಎಕೆ ಮತ್ತು 2 ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel