ಬಿಜೆಪಿಗೆ ಬಿಗ್ ಶಾಕ್: ಎನ್ ಡಿಎಯಿಂದ ಹೊರ ಬಂದ ಜಿಎಫ್ ಪಿ
ಗೋವಾ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು ಎನ್ ಡಿಎ ಮೈತ್ರಿಕೂಟದಿಂದ ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ) ಹೊರಕ್ಕೆ ಬಂದಿದೆ.
ಪಣಜಿ: ಗೋವಾ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು ಎನ್ ಡಿಎ ಮೈತ್ರಿಕೂಟದಿಂದ ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ) ಹೊರಕ್ಕೆ ಬಂದಿದೆ.
ಬಿಜೆಪಿ ಗೋವಾ ವಿರೋಧಿ ನೀತಿಯೇ ಎನ್ ಡಿಎಯಿಂದ ಹೊರಬರಲು ಪ್ರಮುಖ ಕಾರಣ ಎಂದು ಜಿಎಫ್ಪಿ ಅಧಿಕೃತವಾಗಿ ಘೋಷಿಸಿದೆ.
40 ಸ್ಥಾನಗಳನ್ನು ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ ಮೂರು ಸ್ಥಾನಗಳನ್ನು ಹೊಂದಿದೆ. 2017ರಲ್ಲಿ ಜಿಎಫ್ಪಿ ಪಕ್ಷ ದಿ.ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಎನ್ ಡಿಎ ಗೆ ಬೆಂಬಲ ಸೂಚಿಸಿತ್ತು.
2019ರಲ್ಲಿ ಮನೋಹರ್ ಪರಿಕ್ಕರ್ ನಿಧನರಾದ ಬಳಿಕ ಜಿಎಫ್ ಸಿ ಹಾಗೂ ಬಿಜೆಪಿ ಸಂಬಂಧದ ನಡುವೆ ಮೈಮನಸ್ಸು ಮೂಡಿತು. ಸಿಎಂ ಪ್ರಮೋದ ಸಾವಂತ್ ಸಂಪುಟದಲ್ಲಿ ಜಿಎಫ್ ಪಿ ನಾಯಕರನ್ನು ಕೈಬಿಟ್ಟಿದ್ದು ಉಭಯ ಪಕ್ಷಗಳ ನಡುವಿನ ಸಂಬಂಧಕ್ಕೆ ಹಳಸಲು ಕಾರಣವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.