ದೇಶ

ಯುಗಾದಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಸಿಎಂ ಸೇರಿ ಗಣ್ಯರ ಶುಭಾಶಯ

Raghavendra Adiga

ನವದೆಹಲಿ/ಬೆಂಗಳೂರು: ಪ್ಲವನಾಮ ಸಂವತ್ಸರ ಪ್ರಾರಂಭವಾಗಿರುವ ಇಂದಿನ ಯುಗಾದಿ ಹಬ್ಬವನ್ನು ದೇಶಾದ್ಯಂತ ಜನತೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಿಎಂ ಬಿ,ಎಸ್, ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.

ಕನ್ನಡದಲ್ಲೇ ಟ್ವೀಟ್ ಮಾಡಿರುವ ನರೇಂದ್ರ ಮೋದಿ "ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗು ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗು ಸಂತೋಷ ಪಸರಿಸಲಿ." ಎಂದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಕನ್ನಡದಲ್ಲಿ ಟ್ವೀಟ್ ಮಾಡಿ ಶುಭ ಹಾರೈಸಿದ್ದು "ಯುಗಾದಿ ಹಬ್ಬದ ಈ ಸಮಯದಲ್ಲಿ ಕರ್ನಾಟಕದ ನಮ್ಮ ಸಹೋದರ, ಸಹೋದರಿಯರಿಗೆ ಹಾಗೂ ವಿಶ್ವದೆಲ್ಲೆಡೆ ಇರುವ ಕನ್ನಡಿಗರಿಗೆ ಶುಭಾಶಯಗಳು ಮತ್ತು ಶುಭಹಾರೈಕೆಗಳು. ಈ ಶುಭ ಸಂದರ್ಭವು ಎಲ್ಲರಿಗೂ ಒಳ್ಳೆಯ ಆರೋಗ್ಯ, ನೆಮ್ಮದಿ ಹಾಗು ಸಮೃದ್ಧತೆ ತರಲಿ" ಎಂದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ "'ನಾಡಿನ ಸಮಸ್ತ ಜನತೆಗೆ ಯುಗಾದಿಯ ಹಾರ್ದಿಕ ಶುಭಾಶಯಗಳು. ನೂತನ ಪ್ಲವ ಸಂವತ್ಸರವು ಎಲ್ಲರ ಬಾಳಿನಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಯಶಸ್ಸನ್ನು ಹೊತ್ತು ತರಲಿ, ಸಾಂಕ್ರಾಮಿಕ ರೋಗದ ಪಿಡುಗು ನಾಡಿನಿಂದ ತೊಲಗಲಿ. ನಾವೂ ಸುರಕ್ಷಿತರಾಗಿದ್ದು, ಇತರರೂ ಸುರಕ್ಷಿತರಾಗಿರುವಂತೆ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬ ಆಚರಿಸೋಣ" ಎಂದು ಹಾರೈಸಿದ್ದಾರೆ.

SCROLL FOR NEXT