ದೇಶ

ಕೋವಿಡ್-19 ಪರಿಣಾಮ: ಆಮ್ಲಜನಕ ಪೂರೈಕೆ ಫೆಬ್ರವರಿಯಿಂದ ಏಪ್ರಿಲ್ ಗೆ 4 ಪಟ್ಟು ಹೆಚ್ಚಳ 

Srinivas Rao BV

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಪರಿಣಾಮ ಆಮ್ಲಜನಕ ಪೂರೈಕೆಯಲ್ಲಿ ಫೆಬ್ರವರಿ ತಿಂಗಳಿನಿಂದ ಏಪ್ರಿಲ್ ತಿಂಗಳಲ್ಲಿ 4 ಪಟ್ಟು ಏರಿಕೆಯಾಗಿದೆ.

ಸರ್ಕಾರದ ಮೂಲಗಳ ಪ್ರಕಾರ ಫೆಬ್ರವರಿ ಕೊನೆಯ ವಾರದಲ್ಲಿ ದಿನವೊಂದಕ್ಕೆ 1,273 ಮೆಟ್ರಿಕ್ ಟನ್ ನಷ್ಟು ಆಮ್ಲಜನಕದ ಅಗತ್ಯವಿತ್ತು. ಆದರೆ ಈಗ ಏ.17 ವೇಳೆಗೆ ಇದು ದಿನವೊಂದಕ್ಕೆ 4,739 ಮೆಟ್ರಿಕ್ ಟನ್ ಗಳಷ್ಟಾಗಿದೆ.

ವೈದ್ಯಕೀಯ ಆಕ್ಸಿಜನ್ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಹೆಚ್ಚಿಸುವುದಕ್ಕಾಗಿ ಕ್ರಮ ಕೈಗೊಂಡಿದೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ 162 ಪ್ರೆಷರ್ ಸ್ವಿಂಗ್ ಆಡ್ಸರ್ಪ್ಷನ್ ಆಮ್ಲಜನಕ ಘಟಕಗಳನ್ನು ಕೇಂದ್ರ ಮಂಜೂರು ಮಾಡಲಾಗಿದೆ ಎಂದು ಹೇಳಿದೆ. ಕೋವಿಡ್-19 2 ನೇ ಅಲೆಯಲ್ಲಿ ಆಕ್ಸಿಜನ್ ಬಳಕೆ ಹೆಚ್ಚು ಪ್ರಮಾಣದಲ್ಲಿದೆ ಎಂದು ಐಸಿಎಂಆರ್ ನ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ. 

SCROLL FOR NEXT