ಆಕ್ಸಿಜನ್ ಸಾಗಣೆ (ಸಂಗ್ರಹ ಚಿತ್ರ) 
ದೇಶ

ಆಕ್ಸಿಜನ್, ಸಂಬಂಧಿಸಿದ ಉಪಕರಣ, ಔಷಧ ಆಮದು ಮೇಲೆ ಸೀಮಾ ಸುಂಕ ತಾತ್ಕಾಲಿಕ ರದ್ದುಗೊಳಿಸಿದ ಕೇಂದ್ರ

ದೇಶಾದ್ಯಂತ ಕೋವಿಡ್-19 ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24 ರಂದು ಹಲವಾರು ಕ್ರಮಗಳನ್ನು ಘೋಷಿಸಿದೆ. 

ನವದೆಹಲಿ: ದೇಶಾದ್ಯಂತ ಕೋವಿಡ್-19 ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24 ರಂದು ಹಲವಾರು ಕ್ರಮಗಳನ್ನು ಘೋಷಿಸಿದೆ. 

ಆಕ್ಸಿಜನ್ ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳು, ಔಷಧಗಳ ಮೇಲೆ ವಿಧಿಸಲಾಗುವ ಸೀಮಾ ಸುಂಕ, ಹಾಗೂ ಆರೋಗ್ಯ ಸೆಸ್ ನ್ನು ಮೂರು ತಿಂಗಳ ವರೆಗೆ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೋವಿಡ್-19 ಲಸಿಕೆ ಆಮದು ಮಾಡಿಕೊಳ್ಳುವುದಕ್ಕೂ ಮೂರು ತಿಂಗಳ ವರೆಗೆ ಈ ವಿನಾಯಿತಿ ಅನ್ವಯವಾಗಲಿದೆ. 

ಈ ಕ್ರಮಗಳಿಂದಾಗಿ ಅಗತ್ಯವಿರುವ ಆಕ್ಸಿಜನ್  ಹಾಗೂ ಸಂಬಂಧಿತ ಉಪಕರಣಗಳು, ಔಷಧಗಳ ಲಭ್ಯತೆ ಹೆಚ್ಚಳವಾಗುವುದರ ಜೊತೆಗೆ ಅಗ್ಗದ ದರದಲ್ಲಿ ಲಭ್ಯವಾಗುತ್ತವೆ. ಇದೇ ವೇಳೆ ಈ ಆದೇಶದ ವ್ಯಾಪ್ತಿಯಲ್ಲಿ ಬರುವ ಉಪಕರಣಗಳ ಕಸ್ಟಮ್ ಕ್ಲಿಯರೆನ್ಸ್ ತಡೆರಹಿತ ಮತ್ತು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. 

ಆಸ್ಪತ್ರೆ ಹಾಗೂ ಮನೆಗಳಲ್ಲಿ ಕೋವಿಡ್-19 ರೋಗಿಗಳು ಬಳಕೆ ಮಾಡುವ ವೈದ್ಯಕೀಯ ಉಪಕರಣಗಳ ಪೂರೈಕೆ, ವೈದ್ಯಕೀಯ ಶ್ರೇಣಿಯ ಆಕ್ಸಿಜನ್ ನ ಪೂರೈಕೆ ಹೆಚ್ಚಿಸುವ ತುರ್ತು ಅಗತ್ಯವಿದೆ, ಸಂಬಂಧಪಟ್ಟ ಸಚಿವಾಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಮೋದಿ ಹೇಳಿದ್ದಾರೆ. ರೆಮ್ಡಿಸಿವಿರ್ ಹಾಗೂ ಅದರ ಎಪಿಐ (ಸಕ್ರಿಯ ಔಷಧೀಯ ಘಟಕಾಂಶ)ಗಳ ಮೇಲಿನ ಮೂಲ ಸೀಮಾ ಸುಂಕಕ್ಕೆ ವಿನಾಯ್ತಿ ನೀಡಬೇಕೆಂದು ಮೋದಿ ಹೇಳಿದ್ದಾರೆ. 

ಯಾವುದಕ್ಕೆಲ್ಲಾ ವಿನಾಯಿತಿ? 

ವೈದ್ಯಕೀಯ ದರ್ಜೆ ಆಕ್ಸಿಜನ್ ಕಾನ್ಸಂಟ್ರೇಟರ್, ಫ್ಲೋ ಮೀಟರ್ , ರೆಗ್ಯುಲೇತರ್, ಕನೆಕ್ಟರ್, ಟ್ಯೂಬಿಂಗ್ ವ್ಯಾಕ್ಯೂಂ ಪ್ರೆಷರ್ ಸ್ವಿಂಗ್ ಅಲಾಬ್ಸರ್ಪ್ಷನ್ (ವಿಪಿಎಸ್ಎ) ಪ್ರೆಷರ್ ಸ್ವಿಂಗ್ ಅಬ್ಸಾರ್ಬ್ಷನ್ (ಪಿಎಸ್ಎ) ಆಕ್ಸಿಜನ್ ಘಟಕಗಳು, ಲಿಕ್ವಿಡ್/ ಅನಿಲ ಆಕ್ಸಿಜನ್ ನ್ನು ಉತ್ಪಾದಿಸುವ ಕ್ರಯೋಜನಿಕ್ ಆಕ್ಸಿಜನ್ ಏರ್ ಸಪರೇಷನ್ ಯುನಿಟ್ (ಎಎಸ್ ಯು) ಮುಂತಾದವುಗಳಿಗೆ ವಿನಾಯಿತಿ ಲಭ್ಯವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT