ದೇಶ

ಕೋವಿಡ್ -19: ಏ. 26 ರಿಂದಲೇ ಬೇಸಿಗೆ ರಜೆ ಘೋಷಿಸುವಂತೆ ಸುಪ್ರೀಂಗೆ ಸಿಜೆಐಗೆ ಎಸ್‌ಸಿಬಿಎ ಮನವಿ

Lingaraj Badiger

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 26ರಿಂದಲೇ ಬೇಸಿಗೆ ರಜೆ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್(ಎಸ್‌ಸಿಬಿಎ) ಭಾನುವಾರ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಮನವಿ ಮಾಡಿದೆ.

ಎಸ್‌ಸಿಬಿಎ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಈ ಸಂಬಂಧ ಹೊಸದಾಗಿ ನೇಮಕಗೊಂಡ ಸಿಜೆಐಗೆ ಪತ್ರ ಬರೆದಿದ್ದು, ನಾಳೆಯಿಂದ ಬೇಸಿಗೆ ರಜೆ ಘೋಷಿಸುವಂತೆ ಮತ್ತು ನ್ಯಾಯಾಲಯದ ಆವರಣದಲ್ಲಿರುವ ಹೆಚ್ಚುವರಿ ಕಟ್ಟಡವನ್ನು  ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿರುವ ವಕೀಲರ ಚೇಂಬರ್ ಬ್ಲಾಕ್ ಅನ್ನು ತಾತ್ಕಾಲಿಕವಾಗಿ ಕೋವಿಡ್ ಕೇರ್ ಸೆಂಟರ್ ಅಥವಾ ಫೀಲ್ಡ್ ಆಸ್ಪತ್ರೆಯಾಗಿ ಪರಿವರ್ತಿಸುವಂತೆ ಬಾರ್ ಅಸೋಸಿಯೇಷನ್ ಸಿಜೆಐಗೆ ಒತ್ತಾಯಿಸಿದೆ.

ಸಾಂಕ್ರಾಮಿಕ ರೋಗವು ದೇಶಾದ್ಯಂತ ಕಾನೂನು ಭ್ರಾತೃತ್ವಕ್ಕೆ ಅಪಾರ ಅಡ್ಡಿ ಉಂಟುಮಾಡಿದೆ. ಸುಪ್ರೀಂ ಕೋರ್ಟ್ ಬಾರ್ ಇದಕ್ಕೆ ಹೊರತಾಗಿಲ್ಲ. ನಮ್ಮ ಸದಸ್ಯರಿಗೆ ಪ್ರತಿದಿನ ಸೋಂಕು ತಗುಲುತ್ತಿದ್ದು, ಕೋವಿಡ್ -19 ಸೋಂಕಿನ ಎರಡನೇ ಅಲೆ ಈಗ ಅವರ ಜೀವನವನ್ನು ಹಾಳುಮಾಡುತ್ತಿದೆ ಎಂದು ಎಸ್ ಸಿಬಿಎ ತಿಳಿಸಿದೆ.

SCROLL FOR NEXT