ದೇಶ

ಅಮೆರಿಕಾದಿಂದ ಭಾರತಕ್ಕೆ 318 ಆಮ್ಲಜನಕ ಸಾಂದ್ರಕಗಳ ಪೂರೈಕೆ!

Nagaraja AB

ನವದೆಹಲಿ: ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ಜಾಗತಿಕ ಬೆಂಬಲ ದೊರೆತಿದೆ. 318 ಆಕ್ಸಿಜನ್ ಸಾಂದ್ರಕಗಳು ಸೋಮವಾರ ಅಮೆರಿಕಾದಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದವು. 

ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟವನ್ನು ಬಲಪಡಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. 318 ಫಿಲಿಪ್ ಆಕ್ಸಿಜನ್ ಸಾಂದ್ರಕಗಳು ಅಮೆರಿಕಾದ ಜೆಎಫ್ ಕೆ ವಿಮಾನ ನಿಲ್ದಾಣದಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಯಾವುದೇ ಸಂದೇಹವಿಲ್ಲಾ, ನಾವು ಈ ಸಾಂಕ್ರಾಮಿಕವನ್ನು ತಗ್ಗಿಸುತ್ತೇವೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಸಿಂಗಾಪುರದಿಂದ 250 ಆಮ್ಲಜನಕ ಸಾಂದ್ರಕಗಳು, 500 ಬಿಐಪಿಎಪಿಎಸ್  ನೆರವು ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ಭಾರತ ಸ್ವೀಕರಿಸಿದೆ. ಏರ್ ಇಂಡಿಯಾ ವಿಮಾನದಲ್ಲಿ ಕಳೆದ ರಾತ್ರಿ ಮುಂಬೈಗೆ ಇವುಗಳನ್ನು ಪೂರೈಸಲಾಯಿತು.

ಲಸಿಕೆಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಭಾರತಕ್ಕೆ ಕಳುಹಿಸಲು ಅಮೆರಿಕ ಭಾನುವಾರ ಒಪ್ಪಿಕೊಂಡಿತು.

ದೇಶದಲ್ಲಿ ಮಾರಕ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 3.52 ಲಕ್ಷ ಹೊಸ ಪ್ರಕರಣಗಳು, 2812 ಸಾವಿನ ಪ್ರಕರಣಗಳು ವರದಿಯಾಗಿವೆ.

SCROLL FOR NEXT