ದೇಶ

ರಾಜ್ಯಗಳಿಗೆ ಕೋವಿಶೀಲ್ಡ್ ಬೆಲೆ ಕಡಿತಗೊಳಿಸಿದ ಸೆರಂ ಇನ್‌ಸ್ಟಿಟ್ಯೂಟ್

Lingaraj Badiger

ನವದೆಹಲಿ: ದೇಶದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಕೋವಿಡ್ -19 ಲಸಿಕೆ ತಯಾರಕ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ರಾಜ್ಯಗಳಿಗೆ ನೀಡುವ ತನ್ನ ಲಸಿಕೆಯ ಬೆಲೆಯನ್ನು ಬುಧವಾರ ಕಡಿತಗೊಳಿಸಿದೆ.

ಸೆರಂ ಇನ್‌ಸ್ಟಿಟ್ಯೂಟ್ ಈ ಹಿಂದೆ ತಾನು ತಯಾರಿಸುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 400 ಬೆಲೆ ನಿಗದಿಪಡಿಸಿತ್ತು. ಆದರೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಕೇಂದ್ರ ಸರ್ಕಾರ ಸಹ ಬೆಲೆ ಕಡಿತಗೊಳಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಈಗ ರಾಜ್ಯಗಳಿಗೆ ಪ್ರತಿ ಡೋಸ್‌ಗೆ 300 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ.

ಈ ಸಂಬಂಧ ಎಸ್‌ಐಐ ಸಿಇಒ ಆಧಾರ್ ಪೂನಾವಾಲ ಅವರು ಇಂದು ಟ್ವೀಟ್ ಮಾಡಿದ್ದು,  ಸೆರಮ್ಇನ್ಸ್ಟ್‌ಇಂಡಿಯಾ ಪರವಾಗಿ ಲೋಕೋಪಕಾರಿ ಸೂಚಕವಾಗಿ, ನಾನು ಈ ಮೂಲಕ ರಾಜ್ಯಗಳಿಗೆ ನೀಡುವ ಲಸಿಕೆಯ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 400 ರಿಂದ 300 ರೂ.ಗೆ ಇಳಿಸುತ್ತಿದ್ದೇವೆ ಎಂದು ಪ್ರಕಟಿಸಿದ್ದಾರೆ.

ಈ ಬೆಲೆ ಕಡಿತ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿಸುತ್ತದೆ. 

ಇದು ವ್ಯಾಕ್ಸಿನೇಷನ್‌ ಅನ್ನು ಮತ್ತಷ್ಟು ಶಕ್ತಗೊಳಿಸುತ್ತದೆ ಮತ್ತು ಅಸಂಖ್ಯಾತ ಜೀವಗಳನ್ನು ಉಳಿಸುತ್ತದೆ ಎಂದು ಪೂನಾವಾಲ ಅವರು ಹೇಳಿದ್ದಾರೆ.

SCROLL FOR NEXT