ದೇಶ

ಕೊರೋನಾ ಹೆಚ್ಚಳ: ಕೇಂದ್ರ ಸರ್ಕಾರದಿಂದ 4.50 ಲಕ್ಷ ರೆಮಿಡಿಸಿವಿರ್ ವಯೆಲ್‍ ಆಮದು

Vishwanath S

ನವದೆಹಲಿ: ರೆಮಿಡಿಸಿವಿರ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತ, ಇತರ ದೇಶಗಳಿಂದ ಈ ಔಷಧವನ್ನು ಆಮದು ಮಾಡಿಕೊಳ್ಳಲಾರಂಭಿಸಿದೆ.

ಮೊದಲ ಹಂತದಲ್ಲಿ 75 ಸಾವಿರ ವಯೆಲ್ ಗಳು ಇಂದು ಭಾರತಕ್ಕೆ ತಲುಪಲಿವೆ. ಅಮೆರಿಕ ಮತ್ತು ಈಜಿಪ್ಟ್ ನ ಕಂಪೆನಿಗಳಿಗೆ ಸರ್ಕಾರಿ ಸ್ವಾಮ್ಯದ ಎಚ್ಎಲ್ಎಲ್ ಲೈಫ್ ಕೇರ್ ಸಂಸ್ಥೆ, ರೆಮಿಡ್ ಸಿವಿರ್ ನ 4 ಲಕ್ಷ 50 ಸಾವಿರ ವಯೆಲ್ ಗಳಿಗೆ ಬೇಡಿಕೆ ಸಲ್ಲಿಸಿದೆ.

ಅಮೆರಿಕದ ಗಿಲೀಡ್ ಸೈನ್ಸನ್ಸ್ ಸಂಸ್ಥೆ ಸುಮಾರು ಒಂದು ಲಕ್ಷ ವಯೆಲ್ ಗಳನ್ನು ಮುಂದಿನ ಎರಡು ದಿನಗಳಲ್ಲಿ ಪೂರೈಸುವ ನಿರೀಕ್ಷೆ ಇದೆ. ಮುಂದಿನ ತಿಂಗಳ 15ರ ವೇಳೆಗೆ ಇನ್ನೂ ಒಂದು ಲಕ್ಷ ವೆಯಲ್ ಗಳನ್ನು ಪೂರೈಸಲಿದೆ. ಈಜಿಪ್ಟ್ ನ ಇವಿಎ ಫಾರ್ಮಾ, ಆರಂಭಿಕವಾಗಿ 10 ಸಾವಿರ ನಂತರ ಪ್ರತಿ 15 ದಿನಗಳಿಗೆ 50 ಸಾವಿರ ವಯೆಲ್ ಗಳನ್ನು ಪೂರೈಸಲಿದೆ.

ದೇಶದಲ್ಲಿ ರೆಮಿಡಿಸಿವಿರ್ ನ ಉತ್ಪಾದನಾ ಸಾಮರ್ಥ್ಯವನ್ನು ಸರ್ಕಾರ ಹೆಚ್ಚಿಸಿದೆ. ಸದ್ಯ, ದೇಶದಲ್ಲಿ ಪರವಾನಿಗೆ ಪಡೆದ ನಾಲ್ಕು ಸಂಸ್ಥೆಗಳಿಂದ ತಿಂಗಳಿಗೆ ಒಂದು ಕೋಟಿ ವಿಯೆಲ್ ಉತ್ಪಾದನೆಯಾಗುತ್ತಿದೆ. ಕಳೆದ ಏಳು ದಿನಗಳಲ್ಲಿ 13 ಲಕ್ಷ 73 ಸಾವಿರ ವಿಯೆಲ್ ಗಳನ್ನು ದೇಶಾದ್ಯಂತ ಪೂರೈಸಲಾಗಿದೆ.

ರೆಮಿಡಿಸಿವಿರ್ ದೇಶದಲ್ಲಿ ಹೆಚ್ಚು ಲಭ್ಯವಾಗುವಂತಾಗಲು ಈ ಔಷಧದ ರಫ್ತನ್ನು ಸರ್ಕಾರ ನಿಷೇಧಿಸಿದೆ.

SCROLL FOR NEXT