ದೇಶ

ಸಂಸತ್ತಿನಲ್ಲಿ ಪ್ರಧಾನಿ ಮೋದಿ, ಶಾ ಸಮ್ಮುಖದಲ್ಲಿ ಪೆಗಾಸಸ್ ಹಗರಣ ಕುರಿತ ಚರ್ಚೆಯನ್ನು ಪ್ರತಿಪಕ್ಷಗಳು ಬಯಸಿವೆ- ಟಿಎಂಸಿ

Nagaraja AB

ನವದೆಹಲಿ: ರಾಷ್ಟ್ರೀಯ ಭದ್ರತೆ ಮತ್ತು ಪೆಗಾಸಸ್ ವಿಚಾರವನ್ನು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಚರ್ಚಿಸಲು ಇಡೀ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ ಎಂದು ತೃಣಮೂಲ ಕಾಂಗ್ರೆಸ್ ಸೋಮವಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟಿಎಂಸಿಯ ರಾಜ್ಯಸಭೆ ಸದಸ್ಯ ಡೆರ್ರಿಕ್ ಒ ಬ್ರಿಯಾನ್, ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ತೈಲ ಬೆಲೆ ಏರಿಕೆ, ಆರ್ಥಿಕತೆ. ಉದ್ಯೋಗ, ಹಣದುಬ್ಬರ, ರಾಷ್ಟ್ರೀಯ ಭದ್ರತೆ ಮತ್ತು ಪೆಗಾಸಸ್ ವಿಚಾರ ಕುರಿತಂತೆ ತಕ್ಷವೇ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರ ಸಮ್ಮುಖದಲ್ಲಿ ಪೆಗಾಸಸ್ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಚರ್ಚೆ ನಡೆಯಬೇಕು, ಇದಕ್ಕೆ ಎಲ್ಲಾ ಪ್ರತಿಪಕ್ಷಗಳು ಒಪ್ಪಿಕೊಂಡಿವೆ. ನಾವು ಕೂಡಾ ಇದೇ ರೀತಿಯಲ್ಲಿ ಯೋಚಿಸಿದ್ದೇವೆ, ಆದ್ದರಿಂದ ಆದ್ದರಿಂದ, ಬಿಜೆಪಿ ತಮ್ಮ ಕೊಳಕು ತಂತ್ರಗಳಿಂದ ಅದನ್ನು ಗೊಂದಲಗೊಳಿಸಬಾರದು ಎಂದು ಹೇಳಿದರು.

ಸರ್ಕಾರ ಯಾವುದೇ ಚರ್ಚೆಯಿಲ್ಲದೆ ತರಾತುರಿಯಲ್ಲಿ ಮಸೂದೆ ಪಾಸ್ ಮಾಡುತ್ತಿದೆ. ಪ್ರತಿ ನಿಮಿಷಕ್ಕೆ ಒಂದರಂತೆ ಏಳು ಮಸೂದೆಗಳನ್ನು ಪಾಸ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ತ್ರಿಪುರಾದಲ್ಲಿ ಟಿಎಂಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬೆಂಗಾವಲು ಪಡೆ ದಾಳಿ ನಡೆದಿದೆ ಎಂದು ಆರೋಪಿಸಿದ ಅವರು, ಆ ರಾಜ್ಯದಲ್ಲಿ ಪ್ರಜಾಪ್ರಭುತ್ವ ತೊಂದರೆಯಲ್ಲಿದೆ. ವಿಡಿಯೋಗಳು ಸಾರ್ವಜನಿಕರ ಬಳಿ ಇವೆ. ನನ್ನ ಜೊತೆ ರಾಜಕೀಯವಾಗಿ ಹೋರಾಡಿ, ತ್ರಿಪುರಾದಲ್ಲಿ ಮತ್ತೆ ಪ್ರಜಾಪ್ರಭುತ್ವ ತರುವುದಾಗಿ ಅಲ್ಲಿನ ಜತೆಗೆ ಪ್ರಮಾಣ ಮಾಡುವುದಾಗಿ ಒಬ್ರಿಯಾನ್ ಹೇಳಿದರು.

SCROLL FOR NEXT