ದೇಶ

ಜಮ್ಮು-ಕಾಶ್ಮೀರದಲ್ಲಿ 30 ವರ್ಷಗಳಲ್ಲಿ 5, 886 ಭದ್ರತಾ ಸಿಬ್ಬಂದಿ ಹುತಾತ್ಮ

Nagaraja AB

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ 30 ವರ್ಷಗಳಲ್ಲಿ 5, 886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.  1989 ರಿಂದ ಆಗಸ್ಟ್ 5, 2019ರವರೆಗೆ ಜಮ್ಮು - ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ 5,886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ  ಎಂದು ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದರು.

ಸಂವಿಧಾನದ 370 ನೇ ವಿಧಿ ರದ್ದತಿಗೂ ಮುನ್ನ ಜಮ್ಮು- ಕಾಶ್ಮೀರದಲ್ಲಿ ನಡೆದ ಭದ್ರತಾ ಸಿಬ್ಬಂದಿ ಹತ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಲಿಖಿತ ಪ್ರತಿಕ್ರಿಯೆ ನೀಡಿದ ರೈ,  ಜಮ್ಮು- ಕಾಶ್ಮೀರ ಉಗ್ರರಿಂದ ಹಿಂಸಾಚಾರ ಪೀಡಿತವಾಗಿದೆ. ಅದನ್ನು ಗಡಿಯುದ್ದಕ್ಕೂ ಬೆಂಬಲಿಸಲಾಗುತ್ತಿದೆ.  ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಆರಂಭವಾದಾಗಿನಿಂದ (1989ರಿಂದ ಆಗಸ್ಟ್ 5, 2019 ರವರೆಗೆ) 5,886 ಭದ್ರತಾ ಸಿಬ್ಬಂದಿ ಭಯೋತ್ಪಾದನಾ ಘಟನೆಗಳಲ್ಲಿ ಹುತಾತ್ಮರಾಗಿರುವುದಾಗಿ ತಿಳಿಸಿದರು.

ಭದ್ರತಾ ಪಡೆಗಳಿಗೆ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಹುತಾತ್ಮ ಭದ್ರತಾ ಪಡೆಯ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

SCROLL FOR NEXT