ದೇಶ

ಕೋವಿಡ್ ಲಸಿಕೆ ಸಂಪೂರ್ಣ ರಕ್ಷಣೆ ನೀಡದಿರಬಹುದು ಆದರೆ ಸಾವಿನ ಅಪಾಯ ಕಡಿಮೆ ಮಾಡುತ್ತದೆ: ಸೌಮ್ಯ ಸ್ವಾಮಿನಾಥನ್

Vishwanath S

ನವದೆಹಲಿ: ಕೊರೋನಾ ಸಾರ್ಸ್-ಕೋವಿ 2 ವಿವಿಧ ರೂಪಾಂತರಗಳ ವಿರುದ್ಧ ಕೋವಿಡ್ ಲಸಿಕೆ ಸಂಪೂರ್ಣ ರಕ್ಷಣೆ ನೀಡದಿರಬಹುದು ಆದರೆ ಖಂಡಿತವಾಗಿಯೂ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಡಬ್ಲ್ಯುಎಚ್‌ಒನ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. 

ಕೊರೋನಾ ಮೂರನೇ ಅಲೆ ಸಾಧ್ಯತೆ ಇರುವುದರಿಂದ ಮುಂಬರುವ ತಿಂಗಳುಗಳಲ್ಲಿ ಜಾಗರೂಕರಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದರು.

ಸೌಮ್ಯ ಸ್ವಾಮಿನಾಥನ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕದ ವಿವಿಧ ಅಂಶಗಳನ್ನು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಿದರು.

ಭಾರತ ವೈವಿಧ್ಯಮಯ ದೇಶ. ಇಲ್ಲಿ ಬಹು ನಂಬಿಕೆಗಳಿದ್ದು ಇಂತಹ ದೇಶದಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನವನ್ನು ಕೈಗೊಳ್ಳುವುದು ಸುಲಭ ಸಾಧ್ಯವಿರಲಿಲ್ಲ ಎಂದು ಸಿಂಗ್ ಹೇಳಿದರು.

ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಡಿಯಲ್ಲಿ ಭಾರತವು ಒಂದು ಗಮನಾರ್ಹ ಸಾಮರ್ಥ್ಯವನ್ನು ತೋರಿಸಿದೆ ಮತ್ತು ಸಂಪನ್ಮೂಲಗಳ ನಿರ್ಬಂಧಗಳ ಹೊರತಾಗಿಯೂ, ಒಂದು ವರ್ಷದೊಳಗೆ, ನಾವು ಒಂದಕ್ಕಿಂತ ಹೆಚ್ಚು ಲಸಿಕೆಗಳನ್ನು ಮತ್ತು ಇತರ ದೇಶಗಳಿಗೆ ವಿತರಿಸುವ ಸ್ಥಿತಿಯಲ್ಲಿದ್ದೇವೆ. ಜಗತ್ತು ಕೂಡ ನಮ್ಮನ್ನು ಎದುರು ನೋಡುತ್ತಿದೆ ಎಂದು ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

SCROLL FOR NEXT