ದೇಶ

ಕಾಶ್ಮೀರ ಕಣಿವೆಗೆ ಉಗ್ರರನ್ನು ಸಾಗಿಸುತ್ತಿದ್ದ ಟ್ರಕ್‌ ತಡೆದಿದ್ದ ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿಗೆ ಶೌರ್ಯ ಪದಕ

Lingaraj Badiger

ನವದೆಹಲಿ: ಕಾಶ್ಮೀರ ಕಣಿವೆಯೊಳಗೆ ನುಸುಳಲು ಯತ್ನಿಸುತ್ತಿದ್ದ ಮೂವರು ಭಯೋತ್ಪಾದಕರನ್ನು ಅಡ್ಡಗಟ್ಟಿ ಹತ್ಯೆಗೈದಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್)ಯ ನಾಲ್ವರು ಸಿಬ್ಬಂದಿಗೆ ಶೌರ್ಯ ಪದಕ ನೀಡಲಾಗಿದೆ.

ಕಾನ್ ಸ್ಟೇಬಲ್ ಗಳಾದ ರಾಹುಲ್ ಕುಮಾರ್, ಮುತ್ತಮಾಲ ರವಿ, ಮುತುಮ್ ಬಿಕ್ರಂಜಿತ್ ಸಿಂಗ್ ಮತ್ತು ಅನಿಲ್ ಲಕ್ರಾ ಅವರು ಉಗ್ರರನ್ನು ಹತ್ಯೆ ಮಾಡಿದ್ದರು.

ಕಳೆದ ವರ್ಷ ಜನವರಿ 31 ರಂದು ಜಮ್ಮುವಿನ ನಗ್ರೋಟಾದಲ್ಲಿರುವ ಬಾನ್ ಟೋಲ್ ಪ್ಲಾಜಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. 

ಜಮ್ಮುವಿನಿಂದ ಶ್ರೀನಗರಕ್ಕೆ ಚಲಿಸುತ್ತಿದ್ದ ಟ್ರಕ್ ಅನ್ನು ಪ್ಲಾಜಾದಲ್ಲಿ ಬೆಳಗ್ಗೆ 5.30 ರ ಸುಮಾರಿಗೆ ತಡೆದು ನಿಲ್ಲಿಸಲಾಗಿತ್ತು. ಅಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸಿಐಎಸ್‌ಎಫ್ ಜಂಟಿ ತಂಡವನ್ನು ಭದ್ರತಾ ತಪಾಸಣೆಗಾಗಿ ನಿಯೋಜಿಸಲಾಗಿತ್ತು.

ಗೂಡ್ಸ್ ಕ್ಯಾರೇಜ್ ತೆರೆಯಲು ಪೊಲೀಸರು ಚಾಲಕನನ್ನು ಕೇಳಿದಾಗ, ಅದರಲ್ಲಿ ಅಡಗಿದ್ದ ಭಯೋತ್ಪಾದಕರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ 

ಚೆಕ್ ಪೋಸ್ಟ್ ನಲ್ಲಿದ್ದ ಕಾನ್ ಸ್ಟೇಬಲ್ ಗಳಾದ ರಾಹುಲ್ ಕುಮಾರ್ ಮತ್ತು ಎಂ ರವಿ ತಕ್ಷಣ ಟ್ರಕ್ ಬಾಗಿಲನ್ನು ಲಾಕ್ ಮಾಡಿ, ಪ್ರತಿ ದಾಳಿ ನಡೆಸಿದ್ದರು.

SCROLL FOR NEXT