ದೇಶ

ರಾಜನಾಥ್ ಸಿಂಗ್ ಪುಣೆ ಭೇಟಿ ವೇಳೆ ಸೇನಾ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರಿಡುವ ಸಾಧ್ಯತೆ

Lingaraj Badiger

ಪುಣೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಸ್ಟ್ 23 ರಂದು ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ (ಡಿಐಎಟಿ) ಮತ್ತು ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ (ಎಎಸ್‌ಐ) ಗೆ ಭೇಟಿ ನೀಡಲಿದ್ದು, ಈ ವೇಳೆ ಕ್ಯಾಂಪಸ್ ನ ಕ್ರೀಡಾಂಗಣಕ್ಕೆ ಟೋಕಿಯೊ ಒಲಂಪಿಕ್ಸ್ ಚಿನ್ನದ ಪದಕ ಸಾಧಕ ನೀರಜ್ ಚೋಪ್ರಾ ಅವರ ಹೆಸರಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ರಕ್ಷಣಾ ಸಚಿವರು ಸೇನಾ ಕ್ರೀಡಾ ಸಂಸ್ಥೆಗೆ ಭೇಟಿ ನೀಡಿದಾಗ, ಕ್ಯಾಂಪಸ್‌ನಲ್ಲಿರುವ ಕ್ರೀಡಾಂಗಣಕ್ಕೆ 'ನೀರಜ್ ಚೋಪ್ರಾ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್, ಪುಣೆ ಕಂಟೋನ್ಮೆಂಟ್' ಎಂದು ಹೆಸರಿಡುವ ಸಾಧ್ಯತೆಯಿದೆ ಎಂದು ರಕ್ಷಣಾ ಪಿಆರ್‌ಒ ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೊ ಒಲಂಪಿಕ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತೀಯ ಸೇನೆಯ ನಾಯಕ್ ಸುಬೇದಾರ್ ನೀರಜ್ ಚೋಪ್ರಾ ಅವರು ಸ್ವತಃ ಎಎಸ್‌ಐನಲ್ಲಿ ತರಬೇತಿ ಪಡೆದಿದ್ದರು.

ಪ್ರಕಟಣೆಯ ಪ್ರಕಾರ, ರಾಜನಾಥ್ ಸಿಂಗ್ ಅವರು ಎಎಸ್‌ಐಗೆ ಭೇಟಿ ನೀಡಿದಾಗ, 16 ಒಲಿಂಪಿಯನ್‌ಗಳನ್ನು ಸನ್ಮಾನಿಸಲಿದ್ದಾರೆ. ಜೊತೆಗೆ ಸೈನ್ಯ ಮತ್ತು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.

SCROLL FOR NEXT