ದೇಶ

ಆಸ್ತಿಗಳು ದೇಶಕ್ಕೆ ಸೇರಿದ್ದು; ಬಿಜೆಪಿ ಅಥವಾ ಮೋದಿಯ ಸ್ವಂತವಲ್ಲ: ಎನ್ ಎಂಪಿ ಕುರಿತು ಮಮತಾ

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಷ್ಟ್ರೀಯ ನಗದೀಕರಣ ಯೋಜನೆಯ ಬಗ್ಗೆ ಮಾತನಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

"ಮೋದಿ ಅಥವಾ ಬಿಜೆಪಿಯದ್ದಾಗಿರದೇ ದೇಶಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡುವುದು ಕುತಂತ್ರ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಎನ್ಎಂಪಿಯನ್ನು ಆಘಾತಕಾರಿ ಹಾಗೂ ದುರದೃಷ್ಟದ ನಿರ್ಣಯ ಎಂದು ಹೇಳಿರುವ ಟಿಎಂಸಿ ನಾಯಕಿ, ಆಸ್ತಿಗಳ ಮಾರಾಟದಿಂದ ಬಂದ ಹಣವನ್ನು ವಿಪಕ್ಷಗಳ ವಿರುದ್ಧ ಚುನಾವಣೆಯಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಆಘಾತಕಾರಿ ಹಾಗೂ ದುರದೃಷ್ಟಕರ ನಿರ್ಧಾರವನ್ನು ನಾವು ಖಂಡಿಸುತ್ತೇವೆ, ಮಾರಾಟ ಮಾಡಲು ಮುಂದಾಗಿರುವ ಆಸ್ತಿಗಳು ದೇಶಕ್ಕೆ ಸೇರಿದ್ದೇ ಹೊರತು ಬಿಜೆಪಿ ಅಥವಾ ಮೋದಿಗೆ ಸೇರಿದ್ದಲ್ಲ ಅವರಿಗೆ ಬೇಕಾದ ಹಾಗೆ ದೇಶದ ಸ್ವತ್ತುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

ಈ ಜನವಿರೋಧಿ ನಿರ್ಧಾವನ್ನು ಇಡೀ ದೇಶವೇ ಒಟ್ಟಾಗಿ ನಿಂತು ವಿರೋಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ. ದೇಶದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ಬಿಜೆಪಿಗೆ ನಾಚಿಕೆಯಾಗಬೇಕು. ದೇಶದ ಆಸ್ತಿಯನ್ನು ಮಾರಾಟ ಮಾಡಲು ಅವರಿಗೆ ಯಾರೂ ಹಕ್ಕನ್ನು ನೀಡಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

SCROLL FOR NEXT