ಸಾಂಕೇತಿಕ ಚಿತ್ರ 
ದೇಶ

ಬಾಲಕಿಯ ಮೇಲೆ 7 ಮಂದಿ ಅಪ್ರಾಪ್ತರಿಂದ ಅತ್ಯಾಚಾರ ನಾಲ್ವರ ಬಂಧನ ಮೂವರಿಗಾಗಿ ಶೋಧ!

ಬಾಲಕಿ ಮೇಲೆ 7 ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್ ನ ರಾಂಚಿ ಲ್ಲಿ ನಡೆದಿದೆ.

ರಾಂಚಿ: ಬಾಲಕಿ ಮೇಲೆ 7 ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ.

ಪೊಲೀಸರು ಈ ಘಟನೆಯನ್ನು ದೃಢಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದರೆ ಇನ್ನಿತರರನ್ನು ಬಂಧಿಸಲು ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

"ಆ.26 ರಂದು ಈ ಘಟನೆ ನಡೆದಿದ್ದು, ಆರೋಪಿಗಳ ಪೈಕಿ ಓರ್ವ ಸಂತ್ರಸ್ತೆಗೆ ಪರಿಚಯವಿದ್ದ ವ್ಯಕ್ತಿಯಾಗಿದ್ದಾನೆ. ಪರಿಚಯವಿದ್ದ ಕಾರಣ ಬಾಲಕಿಯನ್ನು ದ್ವಿಚಕ್ರ ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆ ವೇಳೆಗೆ ಬಾಲಕನ 6 ಸ್ನೇಹಿತರು ಅಲ್ಲಿ ಕಾಯುತ್ತಿದ್ದರು" ಎಂದು ಪೊಲೀಸ್ ಠಾಣೆ ಉಸ್ತುವಾರಿ ಅಧಿಕಾರಿ ರಾಣಾ ಸಿಂಗ್ ಹೇಳಿದ್ದಾರೆ.

ಬೇರೆ ಹುಡುಗರನ್ನು ನೋಡುತ್ತಿದ್ದಂತೆಯೇ ಬಾಲಕಿ ಪರಾರಿಯಾಗಲು ಯತ್ನಿಸಿದಳಾದರೂ ಆಕೆಯ ಮೇಲೆ ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಘಟನೆಯ ಬಳಿಕ ಬಾಲಕಿಗೆ ಪರಿಚಯವಿದ್ದ ಬಾಲಕ ಆಕೆಯನ್ನು ಮನೆಗೆ ಕರೆದೊಯ್ದಿದ್ದಾನೆ, ಘಟನೆಯನ್ನು ಬಾಲಕಿ ಕುಟುಂಬ ಸದಸ್ಯರಿಗೆ ತಿಳಿಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮಾಂದ್ರ ಪ್ರದೇಶದವರಾಗಿದ್ದು ಶನಿವಾರದಂದು ನಾಲ್ವರನ್ನು ಬಂಧಿಸಿ ಬಾಲಾಪರಾಧಿ ನ್ಯಾಯಮಂಡಳಿಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್