ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ 
ದೇಶ

ತಜ್ಞರ ಸಲಹೆ ಮೇರೆಗೆ ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ಬಗ್ಗೆ ನಿರ್ಧಾರ: ಕೇಂದ್ರ ಆರೋಗ್ಯ ಸಚಿವ

ತಜ್ಞರ ವೈಜ್ಞಾನಿಕ ಮಾರ್ಗದರ್ಶನದ ಆಧಾರದ ಮೇಲೆ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶುಕ್ರವಾರ...

ನವದೆಹಲಿ: ತಜ್ಞರ ವೈಜ್ಞಾನಿಕ ಮಾರ್ಗದರ್ಶನದ ಆಧಾರದ ಮೇಲೆ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ನಡೆದ 11 ಗಂಟೆಗಳ ಸುದೀರ್ಘ ಚರ್ಚೆಯ ವೇಳೆ ಮಾತನಾಡಿದ ಮಾಂಡವಿಯಾ ಅವರು, ಭಾರತವು ಕೊರೋನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಕಣ್ಗಾವಲು ಹೆಚ್ಚಿಸಲಾಗಿದೆ ಎಂದರು.

"ಅಪಾಯದಲ್ಲಿರುವ" ದೇಶಗಳಿಂದ ಬಂದ 16,000 ಪ್ರಯಾಣಿಕರಿಗೆ RT-PCR ಪರೀಕ್ಷೆಗಳನ್ನು ನಡೆಸಲಾಗಿದೆ. ಅವರಲ್ಲಿ 18 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ 18 ಪ್ರಯಾಣಿಕರ ಸ್ವ್ಯಾಬ್ ಮಾದರಿಗಳನ್ನು ಓಮಿಕ್ರಾನ್ ರೂಪಾಂತರಿ ಪರೀಕ್ಷಿಸಲು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದರು.

ವೈಜ್ಞಾನಿಕ ಸಲಹೆಗಳ ಆಧಾರದ ಮೇಲೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಮತ್ತು ಬೂಸ್ಟರ್ ಡೋಸ್ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಜ್ಞಾನಿಗಳಲ್ಲಿ ನಂಬಿಕೆ ಇಡುವಂತೆ ಪ್ರತಿಪಕ್ಷಗಳಲ್ಲಿ ಅವರು ಮಾಂಡವಿಯಾ ಅವರು ಮನವಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ, 'ಮರಳುತ್ತಿದ್ದೇವೆ' ಎಂದ CEO

'ಆಪರೇಷನ್ ಸಿಂಧೂರ' ವೇಳೆ ಭಾರತ 'ಇನ್ನಷ್ಟು ಹಾನಿ ಮಾಡಬಹುದಿತ್ತು': ರಾಜನಾಥ್ ಸಿಂಗ್

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

ತೆಲಂಗಾಣದ ಪ್ರಮುಖ ರಸ್ತೆಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್, ಗೂಗಲ್ ಹೆಸರು: ಸರ್ಕಾರಿ ನಿರ್ಧಾರ!

Shocking: ಸಫಾರಿ ತರಬೇತುದಾರನ ಮೇಲೆ ಕರಡಿ ಭೀಕರ ದಾಳಿ, ಬೆಚ್ಚಿಬಿದ್ದ ಪ್ರವಾಸಿಗರು!

SCROLL FOR NEXT