ದೇಶ

ಮುಂಬೈ: ವಸೂಲಿ ಕೇಸ್ ನಲ್ಲಿ ಪರಮ್ ಬೀರ್ ಸಿಂಗ್, ಮತ್ತಿತರ ಮೂವರ ವಿರುದ್ಧ ಚಾರ್ಜ್ ಶೀಟ್ ದಾಖಲು

Nagaraja AB

ಮುಂಬೈ: ವಸೂಲಿ ಪ್ರಕರಣದಲ್ಲಿ ಮುಂಬೈನ ಮಾಜಿ ನಗರ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮತ್ತಿತರ ಮೂವರ ವಿರುದ್ಧ ಅಪರಾಧ ವಿಭಾಗದ ಪೊಲೀಸರು ಗುರ್ ಗಾಂವ್ ನಲ್ಲಿ ಶನಿವಾರ ಚಾರ್ಚ್ ಶೀಟ್ ದಾಖಲಿಸಿದ್ದಾರೆ. ವಸೂಲಿಯಿಂದಾಗಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಪರಮ್ ಬೀರ್ ಸಿಂಗ್ ವಿರುದ್ಧದ ಮೊದಲ ಚಾರ್ಜ್ ಶೀಟ್ ಇದಾಗಿದೆ. ವಸೂಲಿ ಆರೋಪದ ಮೇರೆಗೆ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಸಿಂಗ್ ಅವರನ್ನು ಅಮಾನತು ಮಾಡಿತ್ತು.

ಪರಮ್ ಬೀರ್ ಸಿಂಗ್ ಅಲ್ಲದೇ ಪೊಲೀಸ್ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಸುಮಿತ್ ಸಿಂಗ್ ಮತ್ತು ಅಲ್ಫೇಶ್ ಪಟೇಲ್ ಚಾರ್ಜ್ ಶೀಟ್ ನಲ್ಲಿ ಆರೋಪಿಗಳಾಗಿದ್ದಾರೆ. ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್. ಬಿ. ಭಾಜಿಪಲೆ ಮುಂದೆ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ. 

ತನ್ನ ಎರಡು ಬಾರ್ ಹಾಗೂ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸದಿರಲು 9 ಲಕ್ಷ ರೂಪಾಯಿಯನ್ನು ಪರಮ್ ಬೀರ್ ಸಿಂಗ್ ವಸೂಲಿ ಮಾಡಿದ್ದಾರೆ. ಅಲ್ಲದೇ ಅವರಿಗಾಗಿ ಸುಮಾರು 2.92 ಲಕ್ಷ ರೂ. ಮೊತ್ತದ ಸ್ಮಾರ್ಟ್ ಫೋನ್ ಖರೀದಿಗೆ ಒತ್ತಾಯಿಸಲಾಗಿದೆ ಎಂದು ಬಿಮಲ್ ಅಗರ್ ವಾಲ್ ದೂರು ದಾಖಲಿಸಿದ್ದರು. ಜನವರಿ 2020 ಮತ್ತು ಮಾರ್ಚ್ 2021ರ ನಡುವೆ ಅಪರಾಧ ನಡೆದಿರುವುದಾಗಿ ಪೊಲೀಸ್ ಈ ಹಿಂದೆ ಹೇಳಿಕೆ ನೀಡಿದ್ದರು. 

ಈ ಪ್ರಕರಣದಲ್ಲಿನ ಆರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384 ಮತ್ತು 385 (ಎರಡು ಸುಲಿಗೆಗೆ ಸಂಬಂಧಿಸಿದ್ದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು.

SCROLL FOR NEXT