ಕಾಂಗ್ರೆಸ್ ತೊರೆದ ಗೋವಾ ಮಾಜಿ ಸಿಎಂ ಬಿಜೆಪಿಗೆ ಸೇರ್ಪಡೆ?
ಕಾಂಗ್ರೆಸ್ ನ ನಾಯಕ, ಗೋವಾದ ಮಾಜಿ ಸಿಎಂ ರವಿ ನಾಯ್ಕ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪಣಜಿ: ಕಾಂಗ್ರೆಸ್ ನ ನಾಯಕ, ಗೋವಾದ ಮಾಜಿ ಸಿಎಂ ರವಿ ನಾಯ್ಕ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಬದಲಾವಣೆಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಶಾಸಕ ಸ್ಥಾನಕ್ಕೂ ರವಿ ನಾಯ್ಕ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಗೋವಾದ ಮತ್ತೋರ್ವ ಮಾಜಿ ಸಿಎಂ ಲೂಯ್ಜಿನ್ಹೋ ಫಲೆರಿಯೋ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಟಿಎಂಸಿ ಸೇರ್ಪಡೆಗೊಂಡಿದ್ದರು.
ನಾಯ್ಕ್ ರಾಜೀನಾಮೆ ಮೂಲಕ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ನ ಶಾಸಕರ ಸಂಖ್ಯೆ ಮೂರಕ್ಕೆ ಇಳಿದಿದೆ. ಗೋವಾದಲ್ಲಿ ಪೋಂಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರವಿ ನಾಯ್ಕ್ ಸ್ಪೀಕರ್ ರಾಜೇಶ್ ಪಟ್ನೇಕರ್ ರಾಜೀನಾಮೆ ಸಲ್ಲಿಸಿದ್ದಾರೆ.
ರವಿ ನಾಯ್ಕ್ ಪುತ್ರರೂ ಈಗ ಬಿಜೆಪಿಯಲ್ಲಿದ್ದು "ನನ್ನ ಮುಂದಿನ ನಡೆ ಏನೆಂಬುದನ್ನು ಶೀಘ್ರವೇ ತಿಳಿಸುತ್ತೇನೆ" ಎಂದು ರವಿ ನಾಯ್ಕ್ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.