ರವಿ ಕಿಶನ್ 
ದೇಶ

ಸಿನಿಮಾ ಕಲಾವಿದರಿಗೆ ಗೌರವ ಧನ: ಲೋಕಸಭೆಯಲ್ಲಿ ನಟ, ಬಿಜೆಪಿ ಸಂಸದ ರವಿ ಕಿಶನ್ ಪ್ರಸ್ತಾಪ

ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ. 

ನವದೆಹಲಿ: ಬಿಜೆಪಿ ಸಂಸದ, ಬಹುಭಾಷಾ ನಟ ರವಿ ಕಿಶನ್ ಅವರು ಲೋಕಸಭೆಯಲ್ಲಿ ಸಿನಿಮಾ ಕಲಾವಿದರಿಗೆ ಗೌರವಧನ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಸದನದಲ್ಲಿ ಈ ಹಿಂದೆ ಅರುಣ್ ಜೈಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರು ಗಾಯಕರು, ಗೀತರಚನಕಾರರ ಪರವಾಗಿ ದನಿಯೆತ್ತಿದ್ದನ್ನು ರವಿ ಕಿಶನ್ ಸ್ಮರಿಸಿದ್ದಾರೆ. ಇದೇ ವೇಳೆ ಗಾಯಕರು, ಗೀತರಚನಕಾರರಿಗೆ ಗೌರವ ಧನ ನೀಡಿದ ಬಿಜೆಪಿಗೆ ರವಿ ಕಿಶನ್ ಧನ್ಯವಾದ ಅರ್ಪಿಸಿದರು.

ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ದೀರ್ಘ ಸಮಯ ಕೆಲಸ ಕಂಡುಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ. 

ಇವೆಲ್ಲಾ ಕಾರಣಗಳಿಂದ ವಯಸ್ಸಾದ ಕಲಾವಿದರ ಆರೋಗ್ಯ ನಿರ್ವಹಣೆ ಚಿಕಿತ್ಸಾ ವೆಚ್ಚ ಎಲ್ಲದಕ್ಕೂ ಸಹಾಯವಾಗುವಂತೆ ಸರ್ಕಾರ ಅವರಿಗೆ ಗೌರವ ಧನ ನಿಗದಿ ಪಡಿಸಬೇಕು ಎಂದು ರವಿ ಕಿಶನ್ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT