ಆಕ್ರೋಶಗೊಂಡ ಗ್ರಾಮಸ್ಥರಿಂದ ಸೇನಾ ವಾಹನಕ್ಕೆ ಬೆಂಕಿ (ಸಂಗ್ರಹ ಚಿತ್ರ) 
ದೇಶ

ನಾಗಾಲ್ಯಾಂಡ್ ಹತ್ಯೆ: ಬದುಕಿ ಉಳಿದವರ ಸ್ಥಿತಿ ಗಂಭೀರ; ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಂಬಂಧಿಕರಿಗೆ ಸೂಚನೆ

ನಾಗಾಲ್ಯಾಂಡ್ ನಲ್ಲಿ ಸೇನಾ ದಾಳಿಗೆ ತುತ್ತಾಗಿದ್ದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ.

ದಿಬ್ರುಘರ್: ನಾಗಾಲ್ಯಾಂಡ್ ನಲ್ಲಿ ಸೇನಾ ದಾಳಿಗೆ ತುತ್ತಾಗಿದ್ದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ. ಸಂಬಂಧಿಕರಿಗೆ 13 ಮಂದಿ ಗ್ರಾಮಸ್ಥರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಮಾತನಾಡದಂತೆ ನಾಗಾಲ್ಯಾಂಡ್ ನ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

ಈ ಬಗ್ಗೆ ಸಂತ್ರಸ್ತರ ಸಂಬಂಧಿಕರು ಮಾಹಿತಿ ನೀಡಿದ್ದು, 30 ವರ್ಷಗಳ ಯೆವಾಂಗ್ ಕೊನ್ಯಾಕ್ ಹಾಗೂ ಶೇವಾಂಗ್ ಕೊನ್ಯಾಕ್ (22) ಇಬ್ಬರೂ ದಾಳಿಯಲ್ಲಿ ಗಾಯಗೊಂಡಿದ್ದು ದಿಬ್ರುಘರ್ ನ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆ (ಎಎಂಸಿಹೆಚ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇಬ್ಬರೂ ಗಾಯಾಳುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಪೈಕಿ ಓರ್ವನಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಮತ್ತೊಂದು ವೈದ್ಯಕೀಯ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆ ಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಈಗ ಮೌನಕ್ಕೆ ಶರಣಾಗಿದ್ದು ತಮಗೆ ಮಾಧ್ಯಮಗಳೂ ಸೇರಿದಂತೆ ಯಾರೊಂದಿಗೂ ಈ ಘಟನೆಯ ಬಗ್ಗೆ ಮಾತನಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದಷ್ಟೇ ಹೇಳಿದ್ದಾರೆ.

"ದಯಮಾಡಿ ನಮ್ಮನ್ನು ಏನೂ ಕೇಳಬೇಡಿ. ಆ ಘಟನೆಯ ಬಗ್ಗೆ ಏನನ್ನೂ ಮಾತನಾಡದಂತೆ ಸೂಚನೆ ಬಂದಿದೆ" ಎಂದು ಓರ್ವ ಗಾಯಾಳುವಿನ ಸಂಬಂಧಿಕರು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ