ಸಾಂದರ್ಭಿಕ ಚಿತ್ರ 
ದೇಶ

ಹೆಂಡತಿ ಮೇಲೆ ಅನುಮಾನ: ರುಂಡವನ್ನೇ ಕತ್ತರಿಸಿದ ಪಾಪಿ ಪತಿ!

ಹೆಂಡತಿ ಮೇಲೆ ಅನುಮಾನಪಟ್ಟ ಪತಿಯೊಬ್ಬ, ರಾತ್ರಿ ನಿಧಿಸುವ ಸಮಯದಲ್ಲಿ ಪತ್ನಿಯನ್ನು ಅಮಾನುಷವಾಗಿ ಕೊಂದು ದೇಹದಿಂದ ತಲೆಯನ್ನು ಬೇರ್ಪಡಿಸಿ ತುಂಡರಿಸಿದ ಘಟನೆ ಹೈದರಾಬಾದಿನ ರಾಜೇಂದ್ರ ನಗರದಲ್ಲಿ ನಡೆದಿದೆ. ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಹೈದರಾಬಾದ್: ಹೆಂಡತಿ ಮೇಲೆ ಅನುಮಾನಪಟ್ಟ ಪತಿಯೊಬ್ಬ, ರಾತ್ರಿ ನಿಧಿಸುವ ಸಮಯದಲ್ಲಿ ಪತ್ನಿಯನ್ನು ಅಮಾನುಷವಾಗಿ ಕೊಂದು ದೇಹದಿಂದ ತಲೆಯನ್ನು ಬೇರ್ಪಡಿಸಿ ತುಂಡರಿಸಿದ ಘಟನೆ ಹೈದರಾಬಾದಿನ ರಾಜೇಂದ್ರ ನಗರದಲ್ಲಿ ನಡೆದಿದೆ. ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಘಟನೆ ಹಿನ್ನೆಲೆ: 14 ವರ್ಷಗಳ ಹಿಂದೆ ಸಮ್ರಿನ್ ಬೇಗಂ ಎನ್ನುವ ಯುವತಿಯನ್ನು ಆರೋಪಿ ಫರ್ವೇಜ್ ವಿವಾಹವಾಗಿದ್ದ. ಆದರೆ, ಗಂಡನ ಹಿಂಸೆ ತಾಳಲಾಗದೆ ಸಮ್ರಿನ್ ಬೇಗಂ ಈ ಮೊದಲೇ ವಿಚ್ಚೇದನ ಪಡೆದು ಬೇರೆಯಾಗಿದ್ದರು. ಈ ನಡುವೆ ಕಳೆದ ವರ್ಷ ಇಬ್ಬರೂ ಬಾಳಬೇಕೆಂದು ನಿರ್ಧರಿಸಿ ಪುನ: ಮದುವೆ ಮಾಡಿಕೊಂಡಿದ್ದರು. ಅಂದಿನಿಂದಲೂ ಹೆಂಡತಿ ಮೇಲೆ ಅನುಮಾನ ಶುರುವಾಗಿತ್ತು.

ಇದೇ ವಿಚಾರವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ, ಇಂದು ಬೆಳಿಗ್ಗೆ 4 ಗಂಟೆಗೆ ಮನೆಗೆ ಹೋದ ಫರ್ವೇಜ್ ಹೆಂಡತಿ ನಿದ್ರೆಯಲ್ಲಿದ್ದ ವೇಳೆ ಕತ್ತಿಯಿಂದ ದಾಳಿ ಮಾಡಿದ್ದಾನೆ. ಇಷ್ಟಕ್ಕೆ ಆತನ ಕೋಪ ತೀರದೆ ಆಕೆಯ ದೇಹದಿಂದ ತಲೆಯನ್ನು ಬೇರ್ಪಡಿಸಿ, ಪಕ್ಕದಲ್ಲೇ ಇದ್ದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಹೆಂಡತಿ ಮೇಲಿನ ಅನುಮಾನದಿಂದ ಈ ರೀತಿ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ; ಮೂರನೇ ತ್ರೈಮಾಸಿಕದ ಸಂಕಷ್ಟದ ಬಗ್ಗೆ ಬಾಲಿವುಡ್ ನಟಿ ಮಾತು!

ಪೊಲೀಸರು ಡೀಲ್- ಅಪರಾಧಗಳಲ್ಲಿ ಭಾಗಿಯಾಗಬೇಡಿ, ಲಂಚ ಕೊಟ್ಟು ಇಲಾಖೆ ಸೇರಬೇಡಿ: ದೇವಾಲಯಗಳ ಹುಂಡಿ ರಕ್ಷಣೆಗೆ ತೀರ್ಮಾನ; ಸಿಎಂ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ ವ್ಯಾಪಾರದ ಗುರಿ; Video

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video