ದೇಶ

ದೇಶದಲ್ಲಿ ಇಲ್ಲಿಯವರೆಗೂ ಒಟ್ಟಾರೇ 25 ಓಮಿಕ್ರಾನ್ ಪ್ರಕರಣಗಳು ಪತ್ತೆ: ಲವ್ ಅಗರ್ ವಾಲ್

Nagaraja AB

ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೂ ಒಟ್ಟಾರೇ 25 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಲವ್ ಅಗರ್ ವಾಲ್, ಪತ್ತೆಯಾಗಿರುವ ಎಲ್ಲಾ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿವೆ. ಪತ್ತೆಯಾದ ಒಟ್ಟು ರೂಪಾಂತರಿ ಶೇಕಡಾ 0.4ಕ್ಕಿಂತಲೂ ಕಡಿಮೆ ಇರುವುದಾಗಿ ತಿಳಿಸಿದರು. 

ದೇಶದಲ್ಲಿ ಪತ್ತೆಯಾದ ಒಟ್ಟಾರೇ ಓಮಿಕ್ರಾನ್ ಪ್ರಕರಣಗಳಲ್ಲಿ ರಾಜಸ್ಥಾನದಲ್ಲಿ 9, ಗುಜರಾತಿನಲ್ಲಿ ಮೂರು, ಮಹಾರಾಷ್ಟ್ರದಿಂದ 10, ಕರ್ನಾಟಕದಿಂದ 2 ಹಾಗೂ ದೆಹಲಿಯಿಂದ ಒಂದು ಪ್ರಕರಣ ವರದಿಯಾಗಿದೆ ಎಂದರು.

ಕಳೆದ ವಾರ ದೇಶದಲ್ಲಿ ಒಟ್ಟಾರೇ ಕೋವಿಡ್ ಪಾಸಿಟಿವಿಟಿ ದರ ಶೇ. 0.73 ರಷ್ಟಿತ್ತು. ಕಳೆದ 14 ದಿನಗಳಲ್ಲಿ 10,000ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವುದಾಗಿ ಅವರು ಮಾಹಿತಿ ನೀಡಿದರು.

ಲಸಿಕೆ ಹೊರತಾಗಿಯೂ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಮುಂದುವರೆಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾದದ್ದು ಅಗತ್ಯವಾಗಿದೆ. ಯುರೋಪ್ ನಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯದಿಂದಾಗಿ ಅಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಲವ್ ಅಗರ್ ವಾಲ್ ಹೇಳಿದರು.

SCROLL FOR NEXT