ನಾಗ್ಪುರ: 19 ವರ್ಷದ ಯುವತಿ ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದಾಖಲಿಸಿದ್ದ ದೂರು ಸುಳ್ಳು ಎಂದು ಸಾಬೀತಾಗಿದೆ. ತನ್ನ ಬಾಯ್ ಫ್ರೆಂಡನ್ನು ಮದುವೆಯಾಗುವ ಉದ್ದೇಶದಿಂದ ಆಕೆ ಸುಳ್ಳು ದೂರನ್ನು ದಾಖಲಿಸಿದ್ದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ರಾಸಲೀಲೆ ವಿಡಿಯೋ ಪತಿಗೆ ಕಳಿಸಿದ್ದ ಅತ್ಯಾಚಾರ ಆರೋಪಿಗೆ ಜಾಮೀನು, ಅಕ್ರಮ ಸಂಬಂಧಕ್ಕೆ ಇಬ್ಬರ ಒಪ್ಪಿಗೆ ಇತ್ತು ಎಂದ ಹೈಕೋರ್ಟ್
ಸೋಮವಾರ ಯುವತಿ ನಾಗ್ಪುರ ಠಾಣೆಗೆ ಬಂದು ಗ್ಯಾಂಗ್ ರೇಪ್ ದೂರು ದಾಖಲಿಸಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಸುಳಿವಿನ ಆಧಾರದಲ್ಲಿ ನಗರವಿಡೀ ಆರೋಪಿಗಳಿಗಾಗಿ ಜಾಲಾಡಿದ್ದರು.
ಇದನ್ನೂ ಓದಿ: ಶಿಕ್ಷಕಿಯರ ಕುಮ್ಮಕ್ಕಿನೊಂದಿಗೆ ವಿದ್ಯಾರ್ಥಿನಿಯರ ಮೇಲೆ ಗ್ಯಾಂಗ್ ರೇಪ್: ಪ್ರಾಂಶುಪಾಲ ಸೇರಿ 15 ಮಂದಿ ವಿರುದ್ಧ ಎಫ್ಐಆರ್
ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಅದರಂತೆ ಸುಮಾರು 1000 ಪೊಲೀಸ್ ಸಿಬ್ಬಂದಿ ಅರೋಪಿಗಳ ಶೋದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು 250 ಸಿಸಿ ಟಿವಿ ವಿಡಿಯೋಗಳನ್ನು ತರಿಸಿಕೊಂಡು ಕೂಲಂಕಷ ಪರಿಶೀಲನೆಯನ್ನೂ ಪೊಲೀಸರು ನಡೆಸಿದ್ದರು. ಎಷ್ಟೆಲ್ಲಾ ಕಸರತ್ತು ಮಾಡಿದ ನಂತರವೂ ಆರೋಪಿಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಕ್ಕಿರಲಿಲ್ಲ. ಆಗ ಅನುಮಾನಗೊಂಡ ಪೊಲೀಸರು ದೂರು ನೀಡಿದ ಯುವತಿಯನ್ನು ಕರೆಸಿ ವಿಚಾರನೆ ನಡೆಸಿದಾಗ ಆಕೆ ಸತ್ಯ ಬಾಯಿಬಿಟ್ಟಿದ್ದಾಳೆ.
ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣ: ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ, ಇನ್ನೂ ಇಬ್ಬರಿಗೆ ಜೀವಾವಧಿ ಶಿಕ್ಷೆ