ದೇಶ

ಮುಂಬೈ: ಬೀದಿನಾಯಿಗಳಿಗೆ ಆಹಾರ ಹಾಕಿದ ಮಹಿಳೆಗೆ 8 ಲಕ್ಷ ರೂ. ದಂಡ!

Lingaraj Badiger

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯೊಬ್ಬರು ಬೀದಿನಾಯಿಗಳಿಗೆ ಆಹಾರ ನೀಡಿದ ಕಾರಣಕ್ಕೆ ರೆಸಿಡೆನ್ಶಿಯಲ್ ಸೊಸೈಟಿಯ ನಿರ್ವಹಣಾ ಸಮಿತಿಯು ಬರೋಬ್ಬರಿ 8 ಲಕ್ಷ ರೂ. ದಂಡ ವಿಧಿಸಿದೆ.

40ಕ್ಕೂ ಹೆಚ್ಚು ಕಟ್ಟಡಗಳನ್ನು ಒಳಗೊಂಡಿರುವ ಮುಂಬೈನ ಹೌಸಿಂಗ್ ಕಾಂಪ್ಲೆಕ್ಸ್‍ನ ನಿರ್ವಹಣಾ ಸಮಿತಿಯು ರೆಸಿಡೆನ್ಶಿಯಲ್ ಸೊಸೈಟಿಯ ಆವರಣದೊಳಗೆ ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ಮಹಿಳೆಗೆ 8 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದೆ.

ವಸತಿ ಸಂಕೀರ್ಣದೊಳಗೆ ಬೀದಿನಾಯಿಗಳಿಗೆ ಆಹಾರ ನೀಡುವವರಿಗೆ ಹೌಸಿಂಗ್ ಸೊಸೈಟಿಯು ದಿನಕ್ಕೆ 5,000 ರೂ. ದಂಡ ವಿಧಿಸುತ್ತಿದೆ. ಇದನ್ನು ಕಸದ ಶುಲ್ಕ ಎಂದು ಪರಿಗಣಿಸಿ ವಿಧಿಸಲಾಗುತ್ತದೆ. ಇದುವರೆಗೆ ನನಗೆ ವಿಧಿಸಿದ ದಂಡದ ಮೊತ್ತ 8 ಲಕ್ಷಕ್ಕಿಂತ ಹೆಚ್ಚು ಎಂದು ದಂಡಕ್ಕೆ ಒಳಗಾದ ಮಹಿಳೆ ಅಂಶು ಸಿಂಗ್ ಅವರು ಹೇಳಿದ್ದಾರೆ.

ಜುಲೈ 2021 ರಲ್ಲಿ ಆವರಣದೊಳಗೆ ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ದಂಡ ವಿಧಿಸುವಂತೆ ಸೊಸೈಟಿಯ ವ್ಯವಸ್ಥಾಪಕ ಸಮಿತಿಯು ನಿರ್ಧಾರ ಕೈಗೊಂಡಿದೆ. ಇನ್ನೊಬ್ಬ ನಿವಾಸಿ ಲೀಲಾ ವರ್ಮಾಗೆ ವಿಧಿಸಲಾದ ದಂಡದ ಮೊತ್ತವು ಆರು ಲಕ್ಷ ರೂ. ಇದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಬ್ಬ ನಿವಾಸಿ ಲೀಲಾ ವರ್ಮಾ ಮಾತನಾಡಿ, ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ, ಅದು ದಂಡವನ್ನು ಹಾಕುತ್ತದೆ ಎಂದು ವಿವರಿಸಿದ್ದಾರೆ.

SCROLL FOR NEXT