ಸಾಂದರ್ಭಿಕ ಚಿತ್ರ 
ದೇಶ

ಮರು ಮತಾಂತರಗೊಂಡು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ: ಮತಾಂತರಿತ ಮುಸ್ಲಮರಿಗೆ ಹಿಂದೂ ಸಂಘಟನೆ ಮನವಿ

ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡ ಹಿಂದೂಗಳು ಕೂಡಲೇ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹಿಂದೂ ಸಂಘಟನೆಯೊಂದು ಮನವಿ ಮಾಡಿದೆ.

ಗುರುಗ್ರಾಮ: ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡ ಹಿಂದೂಗಳು ಕೂಡಲೇ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹಿಂದೂ ಸಂಘಟನೆಯೊಂದು ಮನವಿ ಮಾಡಿದೆ.

ಹರ್ಯಾಣದ ಗುರುಗ್ರಾಮದಲ್ಲಿ ನಡೆದ ಬಹಿರಂಗ ಸಾಮೂಹಿಕ ಮುಸ್ಲಿಂ ಪ್ರಾರ್ಥನೆಗೆ ಅಡ್ಡಿಪಡ್ಡಿಸಿದ ಸಂಯುಕ್ತ ಸಂಘರ್ಷ ಸಮಿತಿಯು ಮತಾಂತರಿತ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹೇಳಿದೆ.

ಸಂಯುಕ್ತ ಸಂಘರ್ಷ ಸಮಿತಿಯು  ಸುಮಾರು 32 ಹಿಂದೂ ಪರ ಸಂಘಟನೆಗಳನ್ನು ಹೊಂದಿರುವ ಒಕ್ಕೂಟವಾಗಿದ್ದು, ಈ ಸಂಯುಕ್ತ ಸಂಘರ್ಷ ಸಮಿತಿಯ ಅಧ್ಯಕ್ಷ ಮಹಾವೀರ್ ಭಾರದ್ವಾಜ್ ಅವರು ಮತಾಂತರಿತ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. 

'ಹರ್ಯಾಣದ  ಬಹುಪಾಲು ಮುಸ್ಲಿಮರ ಪೂರ್ವಜರು ಹಿಂದೂ ಸಮುದಾಯಕ್ಕೆ ಸೇರಿದವರು.  ಹೀಗಾಗಿ ಅವರು ಮರು ಮತಾಂತರಗೊಂಡು ಹಿಂಧೂ ಧರ್ಮಕ್ಕೆ ವಾಪಸ್ ಆಗಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ನಾವು ಇಲ್ಲಿನ ಲೀಸರ್ ವ್ಯಾಲಿಯಲ್ಲಿ ಸಾಮೂಹಿಕ 'ಘರ್ ವಾಪ್ಸಿ' ಕಾರ್ಯಕ್ರಮ ಆಯೋಜಿಸುತ್ತೇವೆ. ಆ ಮೂಲಕ ಅವರು ತಮ್ಮ ಪೂರ್ವಜರ ಧರ್ಮಕ್ಕೆ ಹಿಂದುರುಗಬಹುದು. ನಾವು ಅವರನ್ನು ಮುಕ್ತವಾಗಿ ಮತ್ತು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಹರ್ಯಾಣದಲ್ಲಿ ಕೆಲ ಹಿಂದೂಪರ ಸಂಘಟನೆಗಳು ಮುಸ್ಲಿಮರು ತೆರೆದ ಜಾಗದಲ್ಲಿ "ನಮಾಜ್" ನೀಡುವುದನ್ನು ವಿರೋಧಿಸಿತ್ತಿದ್ದು, ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಲು ಅವರು "ಭಾರತ್ ಮಾತಾ ಕಿ ಜೈ" ಮತ್ತು "ಜೈ ಶ್ರೀ ರಾಮ್" ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದರಿಂದ ಹಲವು ಬಾರಿ ಸಮಸ್ಯೆಗಳು ಎದುರಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!