ಸಂಗ್ರಹ ಚಿತ್ರ 
ದೇಶ

ಮೊಬೈಲ್​ನಲ್ಲಿ ಆತ್ಮಹತ್ಯೆ ಸಂಬಂಧ ವಿಡಿಯೋ ನೋಡಿ ನೇಣು ಹಾಕಿಕೊಂಡ ಬಾಲಕ: ಕುಸಿದು ಬಿದ್ದ ತಾಯಿ!

ಇತ್ತೀಚೆಗಂತೂ ಮಕ್ಕಳು ಮೊಬೈಲ್​ ಬಿಟ್ಟರೇ ಜೀವನವೇ ಇಲ್ಲ ಎಂಬಂತೆ ಬದುಕುತ್ತಿವೆ. ಸಣ್ಣ ವಯಸ್ಸಲ್ಲೇ ಮೊಬೈಲ್​ ಆಕರ್ಷಣೆಗೆ ಒಳಗಾಗಿದ್ದ ಬಾಲಕನೋರ್ವ ಜೀವವನ್ನೇ ಕಳೆದುಕೊಂಡಿದ್ದಾನೆ.

ಪಾಣಿಪತ್: ಇತ್ತೀಚೆಗಂತೂ ಮಕ್ಕಳು ಮೊಬೈಲ್​ ಬಿಟ್ಟರೇ ಜೀವನವೇ ಇಲ್ಲ ಎಂಬಂತೆ ಬದುಕುತ್ತಿವೆ. ಸಣ್ಣ ವಯಸ್ಸಲ್ಲೇ ಮೊಬೈಲ್​ ಆಕರ್ಷಣೆಗೆ ಒಳಗಾಗಿದ್ದ ಬಾಲಕನೋರ್ವ ಜೀವವನ್ನೇ ಕಳೆದುಕೊಂಡಿದ್ದಾನೆ.

ಹರಿಯಾಣದ ಪಾಣಿಪತ್ ಜಿಲ್ಲೆಯ ದಹರ್ ಗ್ರಾಮದಲ್ಲಿನ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಮೊಬೈಲ್​ನಲ್ಲಿ ವಿಡಿಯೋ ನೋಡಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಾಲಕ ತನ್ನ ಅಮ್ಮನ ಬಳಿ ಮೊಬೈಲ್​ ಪಡೆದು ಮನೆಯ ಕೋಣೆಯೊಳಗೆ ಹೋಗಿದ್ದಾನೆ. 15 ನಿಮಿಷಗಳ ನಂತರ ತಾಯಿ ಕೋಣೆಯೊಳಗೆ ಹೋಗಿ ನೋಡಿದರೆ ಮಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

ಇನ್ನು ಮಗನ ಆ ಸ್ಥಿತಿ ಕಂಡ ತಾಯಿ ಶವವಾಗಿ ಅಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ನೆರೆಹೊರೆಯವರ ಬಾಲಕನ ಸಹಾಯದಿಂದ ಮೃತದೇಹವನ್ನು ಕುಣಿಕೆಯಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಘಟನೆ ಸಂಬಂಧ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!