ಸಾಂದರ್ಭಿಕ ಚಿತ್ರ 
ದೇಶ

ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ: ಥಿಯೇಟರ್‌ ಭರ್ತಿಗೆ ಅವಕಾಶ, ಫೆ.1ರಿಂದ ಜಾರಿ!

ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಥಿಯೇಟರ್‌ ಭರ್ತಿಗೆ ಅವಕಾಶ ನೀಡಿದೆ.

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಥಿಯೇಟರ್‌ ಭರ್ತಿಗೆ ಅವಕಾಶ ನೀಡಿದೆ. 

ಈ ಹಿಂದೆ ಗೃಹ ಸಚಿವಾಲಯ(ಎಂಎಚ್‌ಎ) ಹೊರಡಿಸಿದ್ದ ಮಾರ್ಗಸೂಚಿಗಳು ಜನವರಿ 31ಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ಹೊಸದಾಗಿ ಕೋವಿಡ್ 19 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಈ ಮಾರ್ಗಸೂಚಿ ಫೆ. 28 ರವರೆಗೆ ಅನ್ವಯಿಸಲಿದೆ.

ಹೊಸ ಮಾರ್ಗಸೂಚಿಗಳಲ್ಲಿ, ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯುಟಿ) ಎಚ್ಚರಿಕೆ ವಹಿಸಲು ಒತ್ತು ನೀಡುವಂತೆ ಮತ್ತು ಕಣ್ಗಾವಲು, ನಿಯಂತ್ರಣ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ.

ಹಿಂದಿನಂತೆ, ಕೋವಿಡ್‌-19 ಸೂಕ್ತ ನಡವಳಿಕೆಗಳ ಪಾಲನೆ, ಮಾಸ್ಕ್‌ಗಳು, ಕೈ ತೊಳೆಯುವುದು, ಸಾಮಾಜಿಕ ದೂರ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ನಿರ್ದೇಶಿಸಲಾಗಿದೆ.

ಮಾರ್ಗಸೂಚಿಗಳ ಪಟ್ಟಿ:

1. ಸಾಮಾಜಿಕ/ ಧಾರ್ಮಿಕ/ ಕ್ರೀಡೆ/ ಮನರಂಜನೆ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಕೂಟಗಳನ್ನು ಈಗಾಗಲೇ ಸಭಾಂಗಣ ಸಾಮರ್ಥ್ಯದ ಗರಿಷ್ಠ 50%ವರೆಗೆ ಅನುಮತಿಸಲಾಗಿತ್ತು. ಇದೀಗ ಹೆಚ್ಚುವರಿ ಭರ್ತಿಗೆ ಅವಕಾಶ ನೀಡಲಾಗಿದೆ.

2. ಸಿನೆಮಾ ಹಾಲ್‌ಗಳು ಮತ್ತು ಚಿತ್ರಮಂದಿರಗಳಿಗೆ ಈಗಾಗಲೇ 50% ಆಸನ ಸಾಮರ್ಥ್ಯದವರೆಗೆ ಅನುಮತಿ ನೀಡಲಾಗಿದೆ. ಈಗ ಅವರಿಗೆ ಹೆಚ್ಚಿನ ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

3. ಕ್ರೀಡಾ ವ್ಯಕ್ತಿಗಳ ಬಳಕೆಗೆ ಈಜುಕೊಳಗಳನ್ನು ಈಗಾಗಲೇ ಅನುಮತಿಸಲಾಗಿದೆ. ಈಗ ಎಲ್ಲರ ಬಳಕೆಗೆ ಈಜುಕೊಳಗಳನ್ನು ಅನುಮತಿಸಲಾಗುವುದು. ಇದಕ್ಕಾಗಿ ಪರಿಷ್ಕೃತ ಎಸ್‌ಒಪಿ ಅನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು (ಎಂಒಎ ಮತ್ತು ಎಸ್) ಎಂಹೆಚ್‌ಎಯೊಂದಿಗೆ ಸಮಾಲೋಚಿಸಿ ನೀಡಲಿದೆ.

4. ಬಿಸಿನೆಸ್ ಟು ಬಿಸಿನೆಸ್(ಬಿ2ಬಿ) ಪ್ರದರ್ಶನ ಸಭಾಂಗಣಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಈಗ ಎಲ್ಲಾ ರೀತಿಯ ಪ್ರದರ್ಶನ ಸಭಾಂಗಣಗಳಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಎಂಎಚ್‌ಎಯೊಂದಿಗೆ ಸಮಾಲೋಚಿಸಿ ವಾಣಿಜ್ಯ ಇಲಾಖೆಯಿಂದ ಪರಿಷ್ಕೃತ ಎಸ್‌ಒಪಿ ನೀಡಲಾಗುತ್ತದೆ.

5. 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT