ಸಾಂದರ್ಭಿಕ ಚಿತ್ರ 
ದೇಶ

ಸ್ಪುಟ್ನಿಕ್-ಲೈಟ್ ಸಿಂಗಲ್ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನಿರಾಕರಣೆ!

ಸಿಂಗಲ್ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ -ಲೈಟ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆಯನ್ನು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾ ನಿರ್ಮಿತ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಗತ್ಯವನ್ನು ತಳ್ಳಿ ಹಾಕಿದೆ.

ನವದೆಹಲಿ: ಸಿಂಗಲ್ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ -ಲೈಟ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆಯನ್ನು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾ ನಿರ್ಮಿತ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಗತ್ಯವನ್ನು ತಳ್ಳಿ ಹಾಕಿದೆ.

ಜುಲೈ 30 ರಂದು ನಡೆದ ವಿಷಯ ತಜ್ಞರ ಸಮಿತಿ ಸಭೆಯ ಶಿಫಾರಸ್ಸಿನ ಪ್ರಕಾರ, ಸ್ಪುಟ್ನಿಕ್ -ಲೈಟ್ ಕೂಡಾ ಸ್ಪುಟ್ನಿಕ್ ವಿ ಅಂಶಗಳನ್ನು ಹೊಂದಿದ್ದು, ಸುರಕ್ಷಿತವಾಗಿದೆ ಎನ್ನಲಾಗಿದೆ. ಗುರುವಾರ ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವೆಬ್ ಸೈಟ್ ನಲ್ಲಿ ಅಳವಡಿಸಲಾಗಿದೆ.

ಸ್ಪುಟ್ನಿಕ್ -ಲೈಟ್ ಲಸಿಕೆಯ ಮಾರುಕಟ್ಟೆಗೆ ಅನುಮತಿ ಕೋರಿ ಡಿಸಿಜಿಐಗೆ ಪ್ರಸ್ತಾವನೆ ಸಲ್ಲಿಸಿದ್ದ ಡಾ ರೆಡ್ಡೀ'ಸ್ ಲ್ಯಾಬೋರೇಟರೀಸ್, ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುವ ಪ್ರೋಟೋಕಾಲ್ ಅನ್ನು ಸಮಿತಿಯ ಮುಂದೆ ಮಂಡಿಸಿತ್ತು.

ಸ್ಪುಟ್ನಿಕ್ ವಿ (ಅಂದರೆ, ಸ್ಪುಟ್ನಿಕ್-ಲೈಟ್) ನ ಮೊದಲ-ಡೋಸ್ ಅಂಶ ಕುರಿತು ದೇಶದಲ್ಲಿ ಈಗಾಗಲೇ ಡಾ. ರೆಡ್ಡೀಸ್ ಲ್ಯಾಬೋರೆಟರಿ ನೀಡಿರುವ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಗಮನದಲ್ಲಿಟ್ಟುಕೊಂಡು, ಪ್ರತ್ಯೇಕ ಮೂರನೇ ಹಂತದ  ಪ್ರಯೋಗ ಅಗತ್ಯವಿಲ್ಲ ಎಂದು ವಿಶೇಷ ತಜ್ಞರ ಸಮಿತಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ

ಬೆಂಗಳೂರಿನಲ್ಲಿ ಗೃಹಬಳಕೆ ಎಲ್‌ಪಿಜಿಯಲ್ಲೂ ಕೊರತೆ: ಬುಕಿಂಗ್ ನಂಬರ್ ಸ್ವಿಚ್ ಆಫ್; ಹೆಚ್ಚಿದ ಆತಂಕ

ಮಂಡ್ಯ: ಅರ್ಚಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಪತ್ನಿಯ ಕಿರಾತಕ ಸಂಚು ಬಯಲು!

IPL 2026: ವಿರಾಟ್ ಕೊಹ್ಲಿ ನೆಟ್​​ನಲ್ಲಿ ಕಠಿಣ ಅಭ್ಯಾಸ! Video ವೈರಲ್

ರಾಜ್ಯದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ: ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ

SCROLL FOR NEXT