ದೇಶ

ಬಂಧಿತ ಎಲ್ಇಟಿ ಉಗ್ರರ ಹೈದರಾಬಾದ್ ನಿವಾಸದಲ್ಲಿ ಎನ್ ಐಎ ಶೋಧ

Nagaraja AB

ಹೈದರಾಬಾದ್:  ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಇಬ್ಬರು ಲಷ್ಕರ್ -ಇ- ತೊಯ್ಬಾ ಸಂಘಟನೆಯ ಉಗ್ರರ ನಿವಾಸದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಶೋಧ ನಡೆಸಿದ್ದು, ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಏಜೆನ್ಸಿಯ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಕಳೆದ ತಿಂಗಳು ಬಿಹಾರದ ದರ್ಬಾಂಗ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಮಲ್ಲಿಕ್ ಆಲಿಯಾಸ್ ಇಮ್ರಾನ್ ಖಾನ್ ಹಾಗೂ ಆತನ ಸಹೋದರ ಮೊಹಮ್ಮದ್ ನಾಸಿರ್ ಖಾನ್  ಎಂಬುವರನ್ನು ಹೈದರಾಬಾದಿನಲ್ಲಿ ಬುಧವಾರ ಬಂಧಿಸಲಾಗಿತ್ತು.

ನ್ಯೂ ಮಲ್ಲೆಪಲ್ಲಿಯಲ್ಲಿನ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಎನ್ ಐಎ ಅಧಿಕಾರಿಗಳು, ವಿವಿಧ ದೋಷರೋಪಣೆಯ ಸಾಧನಗಳು ಮತ್ತು ಬಹು ಡಿಜಿಟಲ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಸ್ಫೋಟಕ ಸಾಧನ (ಐಇಡಿ) ತಯಾರಿಸುವ ಕಾರ್ಯವಿಧಾನ ಮತ್ತು ಬಳಸುವ ಸಾಮಗ್ರಿಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಒಳಗೊಂಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಬಂಧಿತರು ದೇಶಾದ್ಯಂತ ಉಗ್ರ ಕೃತ್ಯಗಳನ್ನು ನಡೆಸಲು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಯ ಉನ್ನತ ಕಾರ್ಯಕರ್ತರು ನಡೆಸಿದ ಪಿತೂರಿಯ ಭಾಗವಾಗಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯವರಾದ ಆರೋಪಿಗಳು, ಜೂನ್ 17 ರಂದು ದರ್ಬಂಗಾ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ ಒನ್‌ನಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ಎನ್‌ಐಎ ವಹಿಸಿಕೊಂಡ ನಂತರ ಆರೋಪಿಗಳನ್ನು ತಲೆಮರೆಸಿಕೊಂಡಿದ್ದರು.

SCROLL FOR NEXT